alex Certify ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ ಎನಿಸಿದ್ದ ಲತಾ ಅವರ ಅನುಪಸ್ಥಿತಿ ಬಹಳ ಬಾಧಿಸತೊಡಗಿದೆ.

ಇಂಥವರ ಪೈಕಿ ದೆಹಲಿ ಮೂಲದ ಮೇಕಪ್‌ ಆರ್ಟಿಸ್ಟ್‌ ದೀಕ್ಷಿತಾ ಕೂಡ ಒಬ್ಬರು. ಬಹಳ ಆಲೋಚಿಸಿದ ಬಳಿಕ ಅವರು ಲತಾ ಅವರ ರೂಪದ ಮರುಸೃಷ್ಟಿಯ ಪ್ಲ್ಯಾನ್‌ ಮಾಡಿದ್ದಾರೆ. ತಮ್ಮ ಮೇಕಪ್‌ ಕಲೆಯನ್ನು ಬಳಸಿಕೊಂಡು ಲತಾ ಅವರ ಸುಂದರ ಮುಖವನ್ನು ಮತ್ತೊಮ್ಮೆ ಸೃಷ್ಟಿಸಿದ್ದಾರೆ. ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

BIG NEWS: ಸುಪ್ರೀಂ ಮೆಟ್ಟಿಲೇರಿದ ಸಿಡಿ ಸಂತ್ರಸ್ತೆ; ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

stuck.in.a.paradise ಖಾತೆಯಲ್ಲಿ ವಿಡಿಯೊ ವೀಕ್ಷಣೆಗೆ ಲಭ್ಯವಿದೆ. ದೀಕ್ಷಿತಾ ಕಲೆಗೆ ಮೆಚ್ಚುಗೆ ಸೂಚಿಸಿರುವ ನೆಟ್ಟಿಗರು, ಲತಾಜೀ ಅವರಿಗೆ ಸಲ್ಲಿಸಲಾದ ನಿಜವಾದ ಶ್ರದ್ಧಾಂಜಲಿ ಇದಾಗಿದೆ. ಇಂಥ ಗೌರವ ಸಲ್ಲಿಸಿದ ಯುವತಿ ನಿಜಕ್ಕೂ ಗ್ರೇಟ್‌ ಎಂದು ಉದ್ಗಾರ ತೆಗೆದಿದ್ದಾರೆ.

ಜ.8 ರಂದು ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಮುಂಬಯಿನ ಖ್ಯಾತ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ 92 ವರ್ಷದ ಲತಾ ಅವರು ದಾಖಲಾದರು. ಸೋಂಕು ಹತೋಟಿಗೆ ಬಂದರೂ ಅಡ್ಡಪರಿಣಾಮಗಳು ಅವರನ್ನು ಬಾಧಿಸತೊಡಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...