alex Certify ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ

ನವದೆಹಲಿ: ರಸ್ತೆಯ ಮೇಲೆ ಮೈಮರೆತು ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಾ ಹೋಗುವವರಿಗೆ ಆಗುತ್ತಿರುವ ಅವಘಡಗಳು ಅಷ್ಟಿಷ್ಟಲ್ಲ. ಅಪಘಾತಗಳು ಒಂದೆಡೆಯಾದರೆ, ಕಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್​ನಲ್ಲಿ ಬಂದು ಫೋನ್​ ಎಗರಿಸುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಉತ್ತರ-ಮಧ್ಯ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಇಬ್ಬರು ಪುರುಷರು ಮಹಿಳೆಯ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್​ ಆಗಿದೆ. ಪೊಲೀಸರು ಎಚ್ಚರಿಕೆ ಕ್ರಮವಾಗಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಓರ್ವ ಮಹಿಳೆ ರಸ್ತೆಯ ಮೇಲೆ ಮೊಬೈಲ್ ಫೋನ್ನಿಂದ ಮಾತನಾಡುತ್ತಾ ಬರುತ್ತಾಳೆ. ಬೈಕ್​ನಲ್ಲಿ ಹಿಂಬದಿಯಿಂದ ಬರುವ ಇಬ್ಬರು ವ್ಯಕ್ತಿಗಳು ಅದನ್ನು ಕಸಿದುಕೊಂಡು ಪರಾರಿಯಾಗುತ್ತಾರೆ. ಮಹಿಳೆ ಕಿರುಚಿಕೊಂಡು ಸ್ವಲ್ಪ ದೂರ ಓಡಿ ಹೋದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಲ್ಲಿರುವ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬಂದರೂ ಖದೀಮರು ತಪ್ಪಿಸಿಕೊಂಡು ಹೋಗಿದ್ದಾರೆ.

ಸಿಸಿ ಟಿವಿ ನೋಡಿದ ಬಳಿಕ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...