ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಧ್ಯ ಪ್ರದೇಶದ ಹೋಶಂಗಾಬಾದ್ನಲ್ಲಿ ಈ ಘಟನೆ ಜರುಗಿದ್ದು, ಕಾನ್ಪುರ ನಿವಾಸಿಯಾದ ಈ ಹುಡುಗಿಯನ್ನು ಮದುವೆ ಮನೆಗೆ ಬಾರದಂತೆ ತಡೆಯೊಡ್ಡಲಾಗಿತ್ತು. “ಬಾಬು….ಬಾಬು….” ಎಂದು ತನ್ನ ಪ್ರಿಯಕರನನ್ನು ಅಂಗಲಾಚುವ ದೃಶ್ಯವನ್ನು ಕಂಡು ನೆಟ್ಟಿಗರ ಮನ ಕರಗಿದೆ. ಕಳೆದ ಮೂರು ವರ್ಷಗಳಿಂದ ಈ ಹುಡುಗಿ ಮತ್ತು ಮದುಮಗ ಲಿವಿಂಗ್ ಇನ್ ಸಂಬಂಧದಲ್ಲಿ ಇದ್ದರೆಂದು ತಿಳಿದುಬಂದಿದೆ.
EPF ಚಂದಾದಾರರಿಗೆ ಮುಖ್ಯ ಮಾಹಿತಿ: ಈ ನಿಯಮ ಅನುಸರಿಸದಿದ್ರೆ ಪಡೆಯಲಾಗಲ್ಲ ಹಣ
ಮದುವೆ ಮನೆಯಲ್ಲಿ ಭದ್ರತೆ ಬಿಗಿ ಇದ್ದ ಕಾರಣ ಹುಡುಗಿಯ ಎಲ್ಲಾ ಯತ್ನಗಳು ವಿಫಲವಾಗಿವೆ. ಆಕೆಯನ್ನು ಪೊಲೀಸರು ಬಂದು ಅಲ್ಲಿಂದ ಕರೆದೊಯ್ದಿದ್ದಾರೆ.
https://youtu.be/Q9xQdqag1HM