
ಮೋಟಾರ್ ಸೈಕ್ಲಿಸ್ಟ್ ಒಬ್ಬ ಸವಾರಿ ಮಾಡಬೇಕಾದ್ರೆ ಇದ್ದಕ್ಕಿದ್ದಂತೆ ಜಿಂಕೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಜಿಂಕೆ ಕೂಡ ಕೆಳ ಬಿದ್ದಿದೆ. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಇಬ್ಬರು ಮೋಟಾರ್‌ಸೈಕ್ಲಿಸ್ಟ್‌ಗಳು ಜಮೀನುಗಳ ನಡುವಿನ ಲೇನ್ ಮೂಲಕ ಪ್ರಯಾಣಿಸುತ್ತಿರುವುದನ್ನು ನೋಡಬಹುದು. ಆದರೆ ಎಲ್ಲಿಂದಲೋ ಜಿಂಕೆ ರಸ್ತೆ ದಾಟುತ್ತಿರುವುದು ಕಂಡು ಬರುತ್ತಿದೆ.
ಸ್ಟಂಟ್ ಮಾಡಲು ಯತ್ನಿಸುತ್ತಿದ್ದ ಬೈಸಿಕಲ್ ಸವಾರ ಜಿಂಕೆಯನ್ನು ನೋಡಿದ ತಕ್ಷಣ ವೇಗವನ್ನು ನಿಯಂತ್ರಿಸಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಓಡುತ್ತಾ ಬಂದ ಜಿಂಕೆ ಮೋಟಾರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ. ಘಟನೆ ನಡೆದಾಗ ಹಿಂದಿನ ಬೈಕ್ ಸವಾರನೊಬ್ಬ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ.
ಟ್ವಿಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸವಾರ ಅಥವಾ ಜಿಂಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಮಂದಿ ಜಿಂಕೆ ಹಾಗೂ ಸವಾರನ ಕ್ಷೇಮವನ್ನು ವಿಚಾರಿಸಿದ್ದಾರೆ. ವಿಡಿಯೋವನ್ನು ಅಪ್‌ಲೋಡ್ ಮಾಡಿದ ನಂತರ 1.1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.