ಎಟಿಎಂ ಒಳಗೆ ಸಿಲುಕಿದ ಜಿಂಕೆ: ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ-ವಿಡಿಯೋ ವೈರಲ್ 12-12-2022 11:59AM IST / No Comments / Posted In: Latest News, India, Live News ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಬಿದ್ದಿರುವ ಘಟನೆ ಗುಜರಾತ್ನ ಧಾರಿ ಎಂಬಲ್ಲಿ ನಡೆದಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದರಿಂದ ಅಲ್ಲಿಯೆ ಅದು ಸಿಕ್ಕಿಬಿದ್ದಿದೆ. ಇದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಅಲ್ಲೇ ಇದ್ದ ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಯಿಗಳ ಗುಂಪಿನಿಂದ ತಪ್ಪಿಸಿಕೊಂಡು ಪಾರಾಗಲು ಜಿಂಕೆಯು ಅಲ್ಲೇ ಇದ್ದ ಎಟಿಎಂ ಒಳಗೆ ಹೋಗಿ ನುಗ್ಗಿದೆ. ನಂತರ ಅದು ಸಿಲುಕಿಕೊಂಡಿದೆ. ವಾಪಸ್ ಹೊರ ಬರಲು ತಿಳಿಯದೇ ಎಟಿಎಂಗಳ ಮೇಲೆಲ್ಲಾ ಹಾರುತ್ತಾ ಹೊರಬರಲು ಪ್ರಯತ್ನಿಸಿದೆ. ನಂತರ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಅವರು ಎಟಿಎಂ ಒಳಗಿದ್ದ ಜಿಂಕೆಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. गुजरात के अमरेली धारी में एक हरण का वीडियो वायरल हुआ है जिसमें कुत्ते के पिछले दौड़ने की वजह से हिरण ATM में घुस गया लेकिन बाहर नहीं निकल पाया.#ViralVideo #animal #Gujarat #ATM #Deer #usergenerated pic.twitter.com/0hTpsQGrel — AajTak (@aajtak) December 11, 2022