
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರ ತಾರಾ ಜೋಡಿ ಯಾವಾಗಲೂ ಪ್ರಚಾರದಲ್ಲಿಯೇ ಇರಲು ಬಯಸುವ ಜೋಡಿ. ಒಂದು ಪತಿ ರಣವೀರ್ ಸಿನಿಮಾ ತೆರೆಗೆ ಅಪ್ಪಳಿಸುವಾಗ ಪತ್ನಿ ದೀಪಿಕಾ ಕಾಣಿಸಿಕೊಂಡು ಪ್ರಚಾರ ಮಾಡುತ್ತಾರೆ. ಇಲ್ಲವೇ ಪತ್ನಿ ದೀಪಿಕಾ ಸಿನಿಮಾ ಅಪರೂಪವಾಗಿ ತೆರೆ ಕಂಡಾಗ ಪತಿ ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಾರೆ.
ಸದ್ಯ ಪತ್ನಿ ದೀಪಿಕಾ ಅವರ ‘ಗೆಹರಾಯಿಯಾನ್’ ಎಂಬ ಹಿಂದಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದ ವಿಮರ್ಶಕರ ಪ್ರಕಾರ ಸಿನಿಮಾ ಸೋತಿದೆ.
ಆದರೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಮಾತ್ರ ಸುದ್ದಿಯಲ್ಲಿದ್ದಾರೆ. ಈ ಬೋಲ್ಡ್ ಅವತಾರಕ್ಕೆ ಮತ್ತಷ್ಟು ಪ್ರಚಾರ ನೀಡಲು ಪತಿ ಮಹಾಶಯ ರಣವೀರ್ ಸಿಂಗ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ಜತೆಗಿನ ’ಲಿಪ್‌ಲಾಕ್’ ಫೋಟೊ ಹಂಚಿಕೊಂಡಿದ್ದಾರೆ.
ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್ ಆದ ದೆಹಲಿ ಯುವತಿ….!
’ನಿನ್ನ ಸಿನಿಮಾದ ಅಭಿನಯದ ಅದ್ಭುತವಾಗಿ, ಬಹಳ ಹೆಮ್ಮೆ ಎನಿಸುತ್ತಿದೆ’ ಎಂದು ರಣವೀರ್ ಬರೆದುಕೊಂಡಿದ್ದಾರೆ. ಇದಕ್ಕೆ ತಾರಾ ಜೋಡಿಯ ಸ್ನೇಹಿತರಾದ ರಕುಲ್ ಪ್ರೀತ್ ಸಿಂಗ್, ಜೋಯಾ ಅಖ್ತರ್ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಗೆಹರಾಯಿಯಾನ್ ಸಿನಿಮಾದಲ್ಲಿ ಆಲಿಶಾ ಖನ್ನಾ ಎಂಬ ಪಾತ್ರವನ್ನು ದೀಪಿಕಾ ನಿಭಾಯಿಸಿದ್ದಾರೆ. ದೀಪಿಕಾ ಜತೆಗೆ ನಟಿ ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ ನಟಿಸಿದ್ದಾರೆ. ಶಕುನ್ ಬಾತ್ರ ಸಿನಿಮಾದ ನಿರ್ದೇಶಕರು. ಆಧುನಿಕ ಜಗತ್ತಿನಲ್ಲಿ ಸಂಬಂಧಗಳ ಸಂಕೀರ್ಣತೆ, ಕೌಟುಂಬಿಕ ಸಮಸ್ಯೆಗಳು, ಬಂಜೆತನದಂಥ ಖಾಸಗಿ ಸಮಸ್ಯೆಗಳೆಲ್ಲವನ್ನೂ ಒಳಗೊಂಡ ಸಿನಿಮಾ ಇದಾಗಿದೆ.
