alex Certify ಕ್ರಿಕೆಟರ್ ದೀಪಕ್ ಚಹರ್ ಮನಗೆದ್ದ ಪ್ರೇಯಸಿ ಜಯಾ ಭಾರದ್ವಾಜ್ ಯಾರು ಗೊತ್ತಾ…? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟರ್ ದೀಪಕ್ ಚಹರ್ ಮನಗೆದ್ದ ಪ್ರೇಯಸಿ ಜಯಾ ಭಾರದ್ವಾಜ್ ಯಾರು ಗೊತ್ತಾ…? ಇಲ್ಲಿದೆ ವಿವರ

ಸದ್ಯ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟಿಗ ದೀಪಕ್ ಚಹರ್  ಸುದ್ದಿಯಲ್ಲಿದ್ದಾರೆ. ನಿನ್ನೆ ತಮ್ಮ ಗೆಳತಿ ಜಯಾ ಭಾರದ್ವಾಜ್‌ಗೆ ಮೈದಾನದಲ್ಲಿಯೇ ಪ್ರಪೋಸ್ ಮಾಡಿದ ಚಹರ್, ಎಲ್ಲರಿಗೆ ಸರ್ಪ್ರೈಸ್ ನೀಡಿದ್ದರು. ಅವರ ಪ್ರೇಮ ನಿವೇದನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿರುವ ಚಹರ್ ಪ್ರೇಯಸಿ ಜಯಾ ಭಾರದ್ವಾಜ್ ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. ಜಯಾ ಭಾರದ್ವಾಜ್ ʼಬಿಗ್ ಬಾಸ್ʼ ಖ್ಯಾತಿಯ ಸಿದ್ಧಾರ್ಥ್ ಭಾರದ್ವಾಜ್  ಸಹೋದರಿ. ಬಿಗ್ ಬಾಸ್ ಅಲ್ಲದೆ ಸಿದ್ಧಾರ್ಥ್ ಭಾರದ್ವಾಜ್ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೋತು ಗೆದ್ದ ದೀಪಕ್​ ಚಹರ್​…….! ಮೈದಾನದಲ್ಲೇ ಗೆಳತಿಗೆ ಪ್ರೇಮ ನಿವೇದನೆ

ಜಯಾ ಭಾರದ್ವಾಜ್, ದೆಹಲಿಯ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಯಾ ಭಾರದ್ವಾಜ್, ಟಿವಿ, ಸಿನಿಮಾಗಳಿಂದ ದೂರವಿದ್ದಾರೆ. ಇದೇ ಕಾರಣಕ್ಕೆ ಇನ್ಸ್ಟಾಗ್ರಾಮ್ ಖಾತೆಯನ್ನು ಖಾಸಗಿಯಾಗಿ ಇರಿಸಿಕೊಂಡಿದ್ದಾರೆ. ಯಾವುದೇ ಮಾಧ್ಯಮದ ಮುಂದೆ ಜಯಾ ಕಾಣಿಸಿಕೊಂಡಿಲ್ಲ.

ದೀಪಕ್ ಚಹರ್ ಮತ್ತು ಜಯಾ ಸಂಬಂಧದ ಬಗ್ಗೆ ಅನೇಕ ದಿನಗಳಿಂದ ಚರ್ಚೆಯಾಗ್ತಿತ್ತು. ಐಪಿಎಲ್ 2021 ರಲ್ಲಿ ಜಯಾ, ದೀಪಕ್ ಜೊತೆಗಿದ್ದಾರೆ. ಸಿಎಸ್ಕೆ ಬಯೋ ಬಬಲ್ ನ ಭಾಗವಾಗಿದ್ದಾರೆ. ಜಯಾಗೆ ಕೂಡ, ಚಹರ್ ಪ್ರಪೋಸ್ ಬಗ್ಗೆ ತಿಳಿದಿರಲಿಲ್ಲ. ಸರ್ಪ್ರೈಸ್ ಪ್ರಪೋಸ್ ಗೆ ಜಯಾ ಒಪ್ಪಿಕೊಂಡಿದ್ದಾರೆ. ಇಬ್ಬರೂ ರಿಂಗ್ ಬದಲಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...