alex Certify ಅಪಘಾತಕ್ಕೀಡಾದ ಭಿಕ್ಷುಕನ ಜೇಬಿನಲ್ಲಿತ್ತು ಕಂತೆ ಕಂತೆ ಹಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತಕ್ಕೀಡಾದ ಭಿಕ್ಷುಕನ ಜೇಬಿನಲ್ಲಿತ್ತು ಕಂತೆ ಕಂತೆ ಹಣ…!

ಉತ್ತರ ಪ್ರದೇಶದ ಗೋರಕ್ಪುರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಿಕ್ಷುಕನಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗಾಯಗೊಂಡು ಕೆಳಗೆ ಬಿದ್ದಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಿದ ಪೊಲೀಸರು ಗುರುತಿನ ಚೀಟಿಗಾಗಿ ಜೇಬು ಪರಿಶೀಲಿಸಿದ ವೇಳೆ ಅದರಲ್ಲಿದ್ದ ಕಂತೆ ಕಂತೆ ಹಣ ಕಂಡು ಸುಸ್ತಾಗಿದ್ದಾರೆ.

50 ವರ್ಷದ ಶರೀಫ್ ಬಾಂಕ್ ಎಂಬ ಈ ಕಿವುಡು ಭಿಕ್ಷುಕನ ಜೇಬಿನಲ್ಲಿ 2,000 ಮುಖಬೆಲೆಯ ಬರೋಬ್ಬರಿ 3.64 ಲಕ್ಷ ರೂಪಾಯಿ ಪತ್ತೆ ಆಗಿದೆ. ಈತ ಉತ್ತರ ಪ್ರದೇಶದ ಪಿಪ್ರಾಚಿ ನಿವಾಸಿ ಎಂದು ಹೇಳಲಾಗಿದೆ. ಭಿಕ್ಷೆಯಿಂದಲೇ ಈತ ಇಷ್ಟೊಂದು ಹಣ ಗಳಿಸಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದಲ್ಲಿ ಭಿಕ್ಷುಕನ ಕಾಲು ಮುರಿದಿದೆ ಎನ್ನಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಗುಣಮುಖನಾದ ಬಳಿಕ ವಿಚಾರಣೆ ನಡೆಸಿ ಹಣವನ್ನು ಮರಳಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...