
ಮಡಿಕೇರಿ: ಯುವತಿಯನ್ನು ಬರ್ಬರವಾಗಿ ಕೊಂದು ಕೆರೆಗೆ ಹಾರಿದ್ದವನ ಶವ ಪತ್ತೆಯಾಗಿದೆ. ನಾಂಗಲ ಗ್ರಾಮದ ಬಳಿ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದ ಬಳಿ ಸೋಮವಾರ ಆರತಿ(23) ವರನ್ನುಕೊಚ್ಚಿ ಕೊಲೆಗೈದಿದ್ದ ತಿಮ್ಮಯ್ಯ ಯುವತಿ ಮನೆ ಬಳಿ ಇರುವ ಕೆರೆಗೆ ಹಾರಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಮೂರು ದಿನಗಳ ನಂತರ ಕೆರೆಯಲ್ಲಿ ಆರೋಪಿ ತಿಮ್ಮಯ್ಯನ ಶವ ಪತ್ತೆಯಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.