alex Certify ಆದಾಯ ತೆರಿಗೆ ಇಲಾಖೆಯಿಂದ ನನಗೆ ‘ಲವ್​ ಲೆಟರ್’​ ಬಂದಿದೆ: NCP ನಾಯಕ ಶರದ್​ ಪವಾರ್​ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಇಲಾಖೆಯಿಂದ ನನಗೆ ‘ಲವ್​ ಲೆಟರ್’​ ಬಂದಿದೆ: NCP ನಾಯಕ ಶರದ್​ ಪವಾರ್​ ಹೇಳಿಕೆ

ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್​ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ದಿನದಲ್ಲಿಯೇ 2004, 2009, 2014 ಮತ್ತು 2020 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್​​​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

ಐಟಿ ನೋಟಿಸ್​ ಸಂಬಂಧ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಐಟಿ ಇಲಾಖೆಯಿಂದ ಲವ್​ ಲೆಟರ್​ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ಐದು ವರ್ಷಗಳ ಹಿಂದೆ ನಮಗೆ ಇಡಿ ಎಂದರೆ ಏನು ಎಂದೇ ತಿಳಿದಿರಲಿಲ್ಲ. ಆದರೆ ಇದು ಕೇಂದ್ರದ ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ಈ ರೀತಿಯ ರಾಜಕೀಯ ಮಾಡಲಾಗ್ತಿದೆ ಎಂದು ಶರದ್​ ಪವಾರ್​ ಆಕ್ರೋಶ ಹೊರ ಹಾಕಿದ್ರು.

ನಾನು 2009ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಬಳಿಕ 2014ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದೆ. 2020ರಲ್ಲಿಯೂ ಕಣಕ್ಕಿಳಿದಿದ್ದೇನೆ. ಇದೀಗ ನನಗೆ ರಾಜ್ಯಸಭಾ ಚುನಾವಣೆಯ ಅಫಿಡವಿಟ್​ಗೆ ಸಂಬಂಧಿಸಿದಂತೆ ನೋಟಿಸ್​ ಬಂದಿದೆ. 2004ರ ಚುನಾವಣೆಯ ಅಫಿಡವಿಟ್​ ಕುರಿತಂತೆ ತನಿಖೆ ನಡೆಸಲು ಈ ನೋಟಿಸ್​ ಕಳಿಸಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...