ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ 25-11-2021 11:14AM IST / No Comments / Posted In: Latest News, India, Live News ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರವು ಆಡಳಿತದ ಪ್ರತಿಯೊಂದು ಅಂಶದಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಕುಟುಕಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಬೆನ್ನಲ್ಲೇ ಇಂದು ಈ ಸುಬ್ರಮಣಿಯನ್ ಸ್ವಾಮಿ ಈ ಹೇಳಿಕೆ ನೀಡ್ತಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ. ಆರ್ಥಿಕತೆ ಹಾಗೂ ಗಡಿ ಭದ್ರತೆ ವಿಚಾರಗಳಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರದ ನಡೆಯನ್ನು ಅವರು ವೈಫಲ್ಯ ಎಂದು ಜರಿದಿದ್ದಾರೆ. ಅಲ್ಲದೇ ಪೆಗಾಸಿಸ್ ಭದ್ರತಾ ಉಲ್ಲಂಘನೆ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಆಂತರಿಕ ಭದ್ರತೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕಾಶ್ಮೀರವು ಅಂಧಕಾರದಲ್ಲಿದೆ ಎಂದು ಕಿಡಿಕಾರಿದ್ದಾರೆ. ಬುಧವಾರವಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಹಾಡಿ ಹೊಗಳಿದ್ದ ಸುಬ್ರಮಣಿಯನ್ ಸ್ವಾಮಿ, ದೀದಿಯ ರಾಜಕೀಯ ನಡೆಗಳನ್ನು ಜಯಪ್ರಕಾಶ್ ನಾರಾಯಣ್, ಮೋರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಹಾಗೂ ವಿ.ನರಸಿಂಹ ರಾವ್ಗೆ ಹೋಲಿಕೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ನುಡಿದಂತೆ ನಡೆಯುತ್ತಾರೆ. ಭಾರತದಲ್ಲಿ ಇಂಥ ಗುಣದ ರಾಜಕಾರಣಿಗಳು ಸಿಗೋದು ತುಂಬಾ ಕಡಿಮೆ ಎಂದು ಟ್ವೀಟಾಯಿಸಿದ್ದರು. Modi Government's Report Card:Economy—FAILBorder Security–FAILForeign Policy –Afghanistan Fiasco National Security —Pegasus NSOInternal Security—Kashmir GloomWho is responsible?–Subramanian Swamy — Subramanian Swamy (@Swamy39) November 24, 2021 Of the all the politicians I have met or worked with, Mamata Banerjee ranks with JP, Morarji Desai, Rajiv Gandhi, Chandrashekhar, and P V Narasimha Rao who meant what they said and said what they meant. In Indian politics that is a rare quality — Subramanian Swamy (@Swamy39) November 24, 2021 I am told by many salaried middle class people that vegetable prices are sky rocketing. I hope people get relief soon — Subramanian Swamy (@Swamy39) November 22, 2021