
ದಾವಣಗೆರೆ: ಕಾರ್ ನ ಟೈಯರ್ ಬ್ಲಾಸ್ಟ್ ಆಗಿ ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ. ದಾವಣಗೆರೆ ಎಸ್ಎಸ್ ಆಸ್ಪತ್ರೆ ಬಳಿ ಘಟನೆ ನಡೆದಿದೆ.
ಸ್ಕೂಟರ್ ನಲ್ಲಿದ್ದ ಶೋಭಾ(49) ಸಾವು ಕಂಡಿದ್ದು, ಕಾರ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಎಸ್ಎಸ್ ಆಸ್ಪತ್ರೆಯಲ್ಲಿ ಮೃತ ಶೋಭಾ ಅವರ ಸಂಬಂಧಿಕರು ದಾಖಲಾಗಿದ್ದು, ಅವರಿಗೆ ಶೋಭಾ ಊಟ ತೆಗೆದುಕೊಂಡು ಹೋಗುತ್ತಿದ್ದರು. ಅಪಘಾತದಲ್ಲಿ ಮೂರು ಕಾರುಗಳು, ಸ್ಕೂಟಿ ಸಂಪೂರ್ಣ ಜಖಂಗೊಂಡಿವೆ. ದಾವಣಗೆರೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.