ಬೆಳಗಾವಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಪುತ್ರಿಗೆ ನೇಣು ಬಿಗಿದು ಅದೇ ಹಗ್ಗಕ್ಕೆ ತಾಯಿ ನೇಣು ಹಾಕಿಕೊಂಡಿದ್ದಾರೆ.
ಪುತ್ರಿ ಚಾಂದಿನಿ(7)ಗೆ ನೇಣು ಹಾಕಿದ ತಾಯಿ ಮಹಾದೇವಿ ಇಂಚಲ(34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹೋದರ, ನಾದಿನಿ ಕಿರುಕುಳಕ್ಕೆ ಬೇಸತ್ತು ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೋಕಾಕ್ ತಾಲ್ಲೂಕಿನ ಖಂನಗಾಂವ ಗ್ರಾಮದ ಯೋಧನೊಂದಿಗೆ ಮಹಾದೇವಿ ಅವರ ಮದುವೆಯಾಗಿದ್ದು, 7 ವರ್ಷಗಳ ಹಿಂದೆ ಪತಿ ಆಕಾಲಿಕವಾಗಿ ನಿಧನರಾಗಿದ್ದರು.
ಈ ಹಿನ್ನೆಲೆಯಲ್ಲಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿಯ ಜೊತೆ ವಾಸವಾಗಿದ್ದರು. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.