ಸೊಸೆಯೊಬ್ಬಳು ತನ್ನ ಅತ್ತೆಗೆ ಬಾಯ್ಫ್ರೆಂಡ್ ಬೇಕಾಗಿದ್ದಾರೆ ಎಂದು ಹಾಕಿದ ಜಾಹೀರಾತೊಂದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ಹೌದು..! ಅಮೆರಿಕದ ನಿವಾಸಿಯಾದ ಸೊಸೆಯೊಬ್ಬರು ತನ್ನ ಅತ್ತೆಗಾಗಿ 40- 60 ವರ್ಷ ಪ್ರಾಯದ ಬಾಯ್ಫ್ರೆಂಡ್ನ ಹುಡುಕಾಟದಲ್ಲಿದ್ದಾರೆ. ಈ ಜಾಹೀರಾತಿನಲ್ಲಿ 2 ದಿನಗಳ ಗುತ್ತಿಗೆ ಕೆಲಸ ಎಂದು ಉಲ್ಲೇಖಿಸಲಾಗಿದೆ.
ಸೋಶಿಯಲ್ ಮೀಡಿಯಾದ ವೆಬ್ಸೈಟ್ ಒಂದರಲ್ಲಿ ಹಾಕಲಾದ ಜಾಹೀರಾತು ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಇದೊಂದು 2ದಿನಗಳ ಗುತ್ತಿಗೆ ಆಧಾರಿತ ಕೆಲಸವಾಗಿದ್ದು ಬಾಯ್ಫ್ರೆಂಡ್ ಆಗಲು ಆಯ್ಕೆಯಾದ ವ್ಯಕ್ತಿಗೆ 72000 ರೂಪಾಯಿ ನೀಡಲಾಗುವುದು ಎಂದು ಬರೆಯಲಾಗಿದೆ.
ನ್ಯೂಯಾರ್ಕ್ನ ಹುಡ್ಸನ್ ನಿವಾಸಿಯಾದ ಮಹಿಳೆಯು ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್ಫ್ರೆಂಡ್ ಬೇಕೆಂದು ಜಾಹೀರಾತನ್ನ ನೀಡಿದ್ದಾರೆ. ಬಾಯ್ಫ್ರೆಂಡ್ ಆಗಬಯಸುವ ವ್ಯಕ್ತಿಗೆ ನೃತ್ಯ ಮಾಡಲು ತಿಳಿದಿರಬೇಕು ಹಾಗೂ ಆತ ಉತ್ತಮ ಸಂಭಾಷಣೆ ನಡೆಸುವವನಾಗಿರಬೇಕು. ಸ್ನೇಹಿತರೊಬ್ಬರ ಮದುವೆಗೆ ತೆರಳುವ ಸಲುವಾಗಿ ಈ ಬಾಯ್ಫ್ರೆಂಡ್ ನೇಮಕ ಮಾಡಿಕೊಳ್ಳಲಾಗ್ತಿದೆ ಎಂತಲೂ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.
2 ದಿನಗಳ ಈ ಹುದ್ದೆಗೆ 1000 ಡಾಲರ್ ಹಣ ಸಂಭಾವನೆ ರೂಪದಲ್ಲಿ ಸಿಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಇದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರ ಎಂದು ಜರಿದಿದ್ದಾರೆ.