ನಾಗಪುರ: ದತ್ತಾತ್ರೇಯ ಹೊಸಬಾಳೆ ಅವರು ಮೂರು ವರ್ಷಗಳ ಅವಧಿಗೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ.
ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಆರ್‌ಎಸ್) ಅಖಿಲ ಭಾರತೀಯ ಪ್ರತಿನಿಧಿ ವಾರ್ಷಿಕ ಸಭೆಯ ನಂತರ ದತ್ತಾತ್ರೇಯ ಹೊಸಬಾಳೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಭಾನುವಾರ ಮರು ಆಯ್ಕೆ ಮಾಡಿದೆ.
ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆ(ಎಬಿಪಿಎಸ್) (2024-2027) ದತ್ತಾತ್ರೇಯ ಹೊಸಬಾಳೆ ಜಿ ಅವರನ್ನು ಸರ್ಕಾರಿವಾಹ್ ಹುದ್ದೆಗೆ ಮರು ಆಯ್ಕೆ ಮಾಡಿದೆ. ಅವರು 2021 ರಿಂದ ಸರ್ಕಾರಿವಾಹದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
2021 ರಲ್ಲಿ ಭಯ್ಯಾಜಿ ಜೋಶಿ ಅವರಿಂದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಹೊಸಬಾಳೆ(69), 2027 ರವರೆಗೆ ಸರ್ಕಾರಿವಾಹ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದೆ. ಹೊಸಬಾಳೆ ಅವರು 1968 ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿದರು ಮತ್ತು ಅದರ ವಿದ್ಯಾರ್ಥಿ ವಿಭಾಗ – ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನಲ್ಲಿ ಕೆಲಸ ಮಾಡಿದರು. 2003 ರಲ್ಲಿ ಅವರು ಆರ್‌ಎಸ್‌ಎಸ್‌ನ ಬೌದ್ಧಿಕ ತರಬೇತಿ ಮತ್ತು 2009 ರಲ್ಲಿ ಸಂಘಟನೆಯ ಸರ್ಕಾರಿವಾಹ್‌ನ ಉಸ್ತುವಾರಿ ವಹಿಸಿಕೊಂಡರು.