alex Certify ನಟ ದರ್ಶನ್ ವಿರುದ್ಧ ಮಹಿಳೆ ದೂರು: ನಿವಾಸದ ಬಳಿ ನಾಯಿ ಕಚ್ಚಿದ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ದರ್ಶನ್ ವಿರುದ್ಧ ಮಹಿಳೆ ದೂರು: ನಿವಾಸದ ಬಳಿ ನಾಯಿ ಕಚ್ಚಿದ ಆರೋಪ

ಬೆಂಗಳೂರು: ನಟ ದರ್ಶನ್ ಅವರ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ್ದು, ಈ ಕುರಿತಾಗಿ ದೂರು ನೀಡಲಾಗಿದೆ.

ಆರ್.ಆರ್. ನಗರದಲ್ಲಿರುವ ದರ್ಶನ್ ಅವರ ಮನೆಯ ಬಳಿ ನಾಯಿ ಮಹಿಳೆ ಮೇಲೆ ದಾಳಿ ಮಾಡಿ ಹೊಟ್ಟೆ ಮತ್ತಿತರ ಭಾಗಕ್ಕೆ ಕಚ್ಚಿದೆ. ಎರಡನೇ ಆರೋಪಿಯಾಗಿ ದರ್ಶನ್ ಅವರ ವಿರುದ್ಧ ದೂರು ನೀಡಲಾಗಿದೆ.

ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯ ಪಕ್ಕ ಮಹಿಳೆ ಕಾರ್ ಪಾರ್ಕ್ ಮಾಡಿದ್ದರು. ವಾಪಸ್ ಹೋಗುವಾಗ ಕಾರ್ ಬಳಿ ಮೂರು ನಾಯಿಗಳು ಕಂಡು ಬಂದಿವೆ. ಅವುಗಳನ್ನು ಪಕ್ಕಕ್ಕೆ ಸರಿಸುವಂತೆ ದರ್ಶನ್ ಕಡೆಯ ಹುಡುಗರಿಗೆ ಮಹಿಳೆ ಹೇಳಿದ್ದಾರೆ. ಈ ವೇಳೆ ಮಹಿಳೆ ಮತ್ತು ದರ್ಶನ್ ಹುಡುಗರ ಮಧ್ಯೆ ವಾಗ್ವಾದ ನಡೆದಿದೆ.

ಪಾರ್ಕಿಂಗ್ ವಿಚಾರವಾಗಿ ಅವರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಮಹಿಳೆಗೆ ದರ್ಶನ್ ಅವರ ನಾಯಿ ಕಚ್ಚಿದೆ. ಅವರು ಚಿಕಿತ್ಸೆ ಪಡೆದಿದ್ದಾರೆ. ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...