alex Certify ಬಿಳಿ ಬ್ರೆಡ್ ಸೇವಿಸುವ ಮುನ್ನ ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಳಿ ಬ್ರೆಡ್ ಸೇವಿಸುವ ಮುನ್ನ ನಿಮಗಿದು ತಿಳಿದಿರಲಿ

ರೆಡಿಯಾಗಿ ಸಿಗುವ ಎಲ್ಲಾ ಆಹಾರ ಖಾದ್ಯಗಳೂ ನಿಮ್ಮ ದೇಹಕ್ಕೆ ಆರೋಗ್ಯಪೂರ್ಣವಲ್ಲ. ಇಂಥವುಗಳಲ್ಲಿ ಒಂದಾದ ಬಿಳಿ ಬ್ರೆಡ್‌ನಿಂದ ಮಧುಮೇಹ ಹಾಗೂ ಬೊಜ್ಜು ಸಂಬಂಧಿ ರೋಗಗಳು ಬರುವ ಸಾಧ್ಯತೆಗಳಿವೆ.

ಬಹಳಷ್ಟು ಮನೆಗಳಲ್ಲಿ ಬೆಳಗ್ಗಿನ ಉಪಹಾರಕ್ಕೆ ಬಳಸಲ್ಪಡುವ ಈ ಬಿಳಿ ಬ್ರೆಡ್‌ಗಳನ್ನು ಪೂರ್ಣ ಮೈದಾದಿಂದ ಮಾಡಲ್ಪಟ್ಟಿವೆ ಎಂಬುದು ನಮ್ಮಲ್ಲನೇಕರಿಗೆ ತಿಳಿದೇ ಇರುವ ವಿಚಾರ. ಗೋಧಿಯ ಹೊಟ್ಟು ಹಾಗೂ ಒಳಪದರಗಳನ್ನು ಪೂರ್ಣವಾಗಿ ತೆಗೆದುಹಾಕಿದ ಬಳಿಕ ಮಿಕ್ಕ ಭಾಗದಿಂದ ಈ ಬ್ರೆಡ್‌ಗಳನ್ನು ಮಾಡಲಾಗುತ್ತದೆ.

ಮಿಲ್‌ಗಳಲ್ಲಿ ಪರಿಪೂರ್ಣ ಗೋಧಿಯ ಅಂಶಗಳನ್ನು ತೆಗೆದು ತೆಳು ಬಣ್ಣದ ಹಿಟ್ಟನ್ನು ತಯಾರಿಸಲಾಗುತ್ತದೆ. ಇದಲ್ಲದೇ, ಗೋಧಿಯಲ್ಲಿರುವ ಎಲ್ಲ ಸ್ವಾಭಾವಿಕ ಎಣ್ಣೆ, ವಿಟಮಿನ್‌ಗಳು ಹಾಗೂ ಪೋಷಕಾಂಶಗಳನ್ನು ತೆಗೆದುಹಾಕುವ ಮೂಲಕ ಬಿಳಿ ಬ್ರೆಡ್ ಬಹಳ ದಿನಗಳವರೆಗೆ ಸೇವಿಸುವಂತೆ ಮಾಡಲಾಗುತ್ತದೆ.

ಇದಲ್ಲದೇ ಪೊಟ್ಯಾಶಿಯಂ ಬ್ರೋಮೇಟ್‌, ಅಜ಼ೋಡಿಕಾರ್ಬೋನಮೈಟ್‌ನಂಥ ರಾಸಾಯನಿಕಗಳಿಂದ ಹಿಟ್ಟನ್ನು ಬ್ಲೀಚ್‌ ಮಾಡಿ, ಸಹಜವಾಗಿ ಇರುವ ಹಳದಿ ಬಣ್ಣದ ಕುರುಹುಗಳನ್ನು ತೆಗೆಯಲಾಗುತ್ತದೆ. ಇದರಿಂದಾಗಿ ಹೃದ್ರೋಗ ಹಾಗೂ ಸಕ್ಕರೆ ಕಾಯಿಲೆಯಂಥ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆಗಳು ಬ್ರೆಡ್‌ನಲ್ಲಿ ಅಧಿಕವಾಗುತ್ತವೆ.

ವಿಪರೀತ ರಿಫೈನ್ ಮಾಡಲ್ಪಟ್ಟ ಬಿಳಿಯ ಬ್ರೆಡ್‌ನಲ್ಲಿ ಖನಿಜಗಳು ಹಾಗೂ ಪೋಷಕಾಂಶಗಳು ಮಾಯವಾಗಿ ಸಕ್ಕರೆ ಅಂಶ ಹೆಚ್ಚಿರುವ ಕಾರಣ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರಿಕೆಯಾಗಬಹುದು. ಅದಲ್ಲದೇ ಹೊಟ್ಟೆ ಕಟ್ಟುವಂಥ ಸಮಸ್ಯೆಗಳನ್ನೂ ಸಹ ಬಿಳಿಯ ಬ್ರೆಡ್ ತಂದೊಡ್ಡಬಲ್ಲದು. ಈ ಬ್ರೆಡ್‌ಗಳಲ್ಲಿ ನಾರಿನಂಶವೇ ಇಲ್ಲದಿರುವ ಕಾರಣ ಹೊಟ್ಟೆಯಲ್ಲಿ ಆಮ್ಲದಂಶ ಹೆಚ್ಚಾಗಿ, ಹೊಟ್ಟೆ ಊದಿಕೊಳ್ಳುವುದು ಹಾಗೂ ಕಟ್ಟಿಕೊಳ್ಳುವಂಥ ಸಮಸ್ಯೆಗಳು ತಲೆದೋರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...