alex Certify ಪೊಲೀಸ್​ ʼಯೂನಿಫಾರ್ಮ್‌ʼ ನಲ್ಲಿ ಡಾನ್ಸ್​ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ʼಯೂನಿಫಾರ್ಮ್‌ʼ ನಲ್ಲಿ ಡಾನ್ಸ್​ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ

ಮೂವರು ಪೊಲೀಸ್​ ಸಿಬ್ಬಂದಿ ಸಮವಸ್ತ್ರದಲ್ಲಿದ್ದಾಗಲೇ ಸಿನಿಮಾ ಹಾಡಿಗೆ ಡ್ಯಾನ್ಸ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಕೊತ್ವಾಲಿಯಲ್ಲಿನ ಮಹಿಳಾ ಸಹಾಯ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಮೂವರು ಕಾನ್​ಸ್ಟೇಬಲ್​ಗಳಾದ ವಸುಧಾ ಮಿಶ್ರಾ, ಯೋಗೇಶ್​ ಕುಮಾರ್​ ಮತ್ತು ಧಮೇರ್ಶ್​ ಮಿಶ್ರಾ ಅವರು ನೃತ್ಯ ಮಾಡಿ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದು, ಸೇವೆಯಿಂದ ಅಮಾನತುಗೊಂಡಿದ್ದಾರೆ.

ಮಹಿಳಾ ಸಿಬ್ಬಂದಿ ವಸುಧಾ ಸೇರಿ ಇನ್ನಿಬ್ಬರು ಕಾನ್ ​ಸ್ಟೇಬಲ್ ​ಗಳು ಹೀರೋ ʼತೂ ಮೇರಾ ಹೀರೋ ಹೈʼ ಹಾಡಿಗೆ…… ರಸ್ತೆ ಮಧ್ಯೆ ಕುಣಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ತಕ್ಷಣವೇ ಇಲಾಖೆಯು ತನಿಖೆ ಆರಂಭಿಸಿತು.

ಈ ನೃತ್ಯ ಮಾಡಿದ್ದು ಫೆಬ್ರವರಿಯಲ್ಲಿ. ಅಲ್ಲದೇ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲಿರುವ ಪೊಲೀಸ್​ ಸಿಬ್ಬಂದಿಗೆ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲು ಅನುಮತಿ ಇರುವುದಿಲ್ಲ. ಮಿಶ್ರಾ ಈ ಹಿಂದೆಯೂ ಕರ್ತವ್ಯದ ವೇಳೆ ಇಂತಹ ವಿಡಿಯೋಗಳನ್ನು ಚಿತ್ರೀಕರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಒಂದು ವಿಡಿಯೋದಲ್ಲಿ ಆಕೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ತನ್ನ ಮೇಜಿನ ಮೇಲೆ ಡ್ಯಾನ್ಸ್​ ಮಾಡಿದ್ದರು.

ಪೋಲೀಸರು ಈ ರೀತಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ನಾವು ಮೂವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಮತ್ತು ಇತರರಿಗೆ ಈ ರೀತಿ ಕಾಣಿಸಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹಿರಿಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...