ಮೂವರು ಪೊಲೀಸ್ ಸಿಬ್ಬಂದಿ ಸಮವಸ್ತ್ರದಲ್ಲಿದ್ದಾಗಲೇ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಕೊತ್ವಾಲಿಯಲ್ಲಿನ ಮಹಿಳಾ ಸಹಾಯ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಮೂವರು ಕಾನ್ಸ್ಟೇಬಲ್ಗಳಾದ ವಸುಧಾ ಮಿಶ್ರಾ, ಯೋಗೇಶ್ ಕುಮಾರ್ ಮತ್ತು ಧಮೇರ್ಶ್ ಮಿಶ್ರಾ ಅವರು ನೃತ್ಯ ಮಾಡಿ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದು, ಸೇವೆಯಿಂದ ಅಮಾನತುಗೊಂಡಿದ್ದಾರೆ.
ಮಹಿಳಾ ಸಿಬ್ಬಂದಿ ವಸುಧಾ ಸೇರಿ ಇನ್ನಿಬ್ಬರು ಕಾನ್ ಸ್ಟೇಬಲ್ ಗಳು ಹೀರೋ ʼತೂ ಮೇರಾ ಹೀರೋ ಹೈʼ ಹಾಡಿಗೆ…… ರಸ್ತೆ ಮಧ್ಯೆ ಕುಣಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಕ್ಷಣವೇ ಇಲಾಖೆಯು ತನಿಖೆ ಆರಂಭಿಸಿತು.
ಈ ನೃತ್ಯ ಮಾಡಿದ್ದು ಫೆಬ್ರವರಿಯಲ್ಲಿ. ಅಲ್ಲದೇ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲಿರುವ ಪೊಲೀಸ್ ಸಿಬ್ಬಂದಿಗೆ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಅನುಮತಿ ಇರುವುದಿಲ್ಲ. ಮಿಶ್ರಾ ಈ ಹಿಂದೆಯೂ ಕರ್ತವ್ಯದ ವೇಳೆ ಇಂತಹ ವಿಡಿಯೋಗಳನ್ನು ಚಿತ್ರೀಕರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಒಂದು ವಿಡಿಯೋದಲ್ಲಿ ಆಕೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ತನ್ನ ಮೇಜಿನ ಮೇಲೆ ಡ್ಯಾನ್ಸ್ ಮಾಡಿದ್ದರು.
ಪೋಲೀಸರು ಈ ರೀತಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ನಾವು ಮೂವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಮತ್ತು ಇತರರಿಗೆ ಈ ರೀತಿ ಕಾಣಿಸಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹಿರಿಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.