alex Certify ನ್ಯೂಯಾರ್ಕ್ ಬೀದಿಯಲ್ಲಿ ಯುವಕನ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ದಂಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ಬೀದಿಯಲ್ಲಿ ಯುವಕನ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಡ್ಯಾನ್ಸರ್ ಒಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಳಿ ಟೀ ಶರ್ಟ್, ಶಾರ್ಟ್ಸ್ ಮತ್ತು ಕಪ್ಪು ಟೋಪಿ ಧರಿಸಿ ಯುವಕ ಕುಣಿದು ಕುಪ್ಪಳಿಸಿದ್ದಾನೆ.

ಯುವಕನ ನೃತ್ಯಕ್ಕೆ ಅಲ್ಲಿದ್ದ ಜನರು ಫಿದಾ ಆಗಿದ್ದಾರೆ. ಕೇವಲ ನೃತ್ಯ ಮಾತ್ರವಲ್ಲ ಜೊತೆಗೆ ಸಾಹಸಗಳನ್ನು ಕೂಡ ಮಾಡಿದ್ದಾನೆ. ಹಾಡಿಗೆ ತಕ್ಕ ಹಾಗೆ ಸ್ಟೆಪ್ಸ್ ಹಾಕಿದ್ದಲ್ಲದೆ ಈತ ಮಾಡಿರುವ ಸಾಹಸ ನೆರೆದವರನ್ನು ದಂಗು ಬಡಿಸಿದೆ. ಫುಲ್ ಎನರ್ಜಿಯೊಂದಿಗೆ ಈತ ನೃತ್ಯ ಮಾಡಿರುವುದು ಎಂಥವರನ್ನೂ ಕೂಡ ಬೆರಗುಗೊಳಿಸುತ್ತದೆ.

ಪ್ರೀತಿಸಿದ್ದಕ್ಕೆ ಯುವಕನಿಗೆ ಬೆಂಕಿ ಹಚ್ಚಿದ ಯುವತಿ ಕುಟುಂಬಸ್ಥರು: ಮಧ್ಯಪ್ರದೇಶದಲ್ಲಿ ನಡೆಯಿತು ಘೋರ ದುರಂತ

ಈ ದೃಷ್ಟಿ ಭ್ರಮಣೆಯ ವಿಡಿಯೋವನ್ನು ‘ಕಿಡ್ ದಿ ವಿಜ್’ ಹೆಸರಿನ ಡ್ಯಾನ್ಸರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಎರಡು ಮಿಲಿಯನ್ ಗೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ನಿಮ್ಮ ಶಕ್ತಿಗೆ ಬೇರೆ ಯಾರೂ ಸಾಟಿಯಿಲ್ಲ ಅಂತಾ ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ಬೆಂಕಿ’ ಎಂದು ಪ್ರತಿಕ್ರಿಯಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...