alex Certify ಕೋಳಿ ಮಾಂಸಕ್ಕೆ ಹಣ ಕೇಳಿದ ದಲಿತ ವ್ಯಕ್ತಿಗೆ ಚಪ್ಪಲಿಯಿಂದ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಳಿ ಮಾಂಸಕ್ಕೆ ಹಣ ಕೇಳಿದ ದಲಿತ ವ್ಯಕ್ತಿಗೆ ಚಪ್ಪಲಿಯಿಂದ ಥಳಿತ

ಕಾನ್ಪುರ: ಉತ್ತರ ಪ್ರದೇಶದ ಲಲಿತ್‌ ಪುರ ಜಿಲ್ಲೆಯಲ್ಲಿ ಉಚಿತ ಕೋಳಿ ಮಾಂಸ ನೀಡಲು ನಿರಾಕರಿಸಿದ ದಲಿತ ವ್ಯಕ್ತಿಯನ್ನು ನಡುರಸ್ತೆಯಲ್ಲೇ ಥಳಿಸಲಾಗಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂತ್ರಸ್ತ ಸುಜನ್ ಅಹಿರ್ವಾರ್ ಎಂಬಾತನನ್ನು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಬೈಕ್‌ ನಲ್ಲಿ ಗ್ರಾಮದಿಂದ ಗ್ರಾಮಕ್ಕೆ ಕೋಳಿ ಮಾಂಸ ಮಾರಾಟ ಮಾಡುವ ಸುಜನ್ ಅಹಿರ್ವಾರ್ ಎಂಬಾತನನ್ನು ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳ ಗುಂಪು ಕೋಳಿ ಕೊಡುವಂತೆ ಕೇಳಿದೆ. ಕೋಳಿಗೆ ಹಣ ಕೊಡುವಂತೆ ಸುಜನ್ ಕೇಳಿಕೊಂಡರೂ ಆರೋಪಿಗಳು ಹಣ ಕೊಡದೇ ಚಪ್ಪಲಿಯಿಂದ ತೀವ್ರವಾಗಿ ಥಳಿಸಿದ್ದಾರೆ.

ದಾರಿಹೋಕರೊಬ್ಬರು ಈ ಘಟನೆಯ ವಿಡಿಯೋ ಮಾಡಿದ್ದು ಇದೀಗ ವೈರಲ್ ಆಗಿದೆ. ಇದರ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...