
ಮೆಜೆಂಟಾ ಸೀರೆಯನ್ನು ಧರಿಸಿದ ವೃದ್ಧೆ ಹಾರ್ಮೋನಿಯಂ ಹಿಡಿದು, ಹೊರಗೆ ಬಯಲಿನಲ್ಲಿ ಹಾಡಿದ್ದಾರೆ. ಆಕೆಯ ಹಿಂದೆ ಕುಳಿತಂತಹ ವ್ಯಕ್ತಿಯೊಬ್ಬರು ಹಾಡಿಗೆ ತಕ್ಕಂತೆ ಢೋಲಕ್ ನುಡಿಸಿದ್ದಾರೆ. ದಿವಂಗತ ದಂತಕಥೆ ಲತಾ ಮಂಗೇಶ್ಕರ್ ಅವರ ಭಾವಪೂರ್ಣ ಹಾಡನ್ನು ಹಾಡಿದ್ದಾರೆ.
1970ರ ಹೀರ್ ರಾಂಝಾ ಚಿತ್ರದ ‘ಮಿಲೋ ನಾ ತುಮ್ ತೋ ಹಮ್ ಘಬ್ರೇ’ ಎಂಬ ಹಾಡನ್ನು ದಾದಿ ಮಾ ಆಯ್ಕೆ ಮಾಡಿಕೊಂಡಿದ್ದಾರೆ. ಹಾಡುತ್ತಾ ಅವರು ಹಾರ್ಮೋನಿಯಂ ಅನ್ನು ಸುಂದರವಾಗಿ ನುಡಿಸುವುದನ್ನು ಕಾಣಬಹುದು.
ನೆಟ್ಟಿಗರು ದೇಸಿ ದಾದಿಯ ಸುಮಧುರ ಧ್ವನಿಯನ್ನು ಇಷ್ಟಪಟ್ಟಿದ್ದಾರೆ. ಆಕೆಯ ಬಗ್ಗೆ ಪ್ರೀತಿ ಮತ್ತು ಪ್ರಶಂಸೆಯೊಂದಿಗೆ ಕಾಮೆಂಟ್‌ಗಳನ್ನು ತುಂಬಿದ್ದಾರೆ.
ವಿಡಿಯೋ ಕೃಪೆ: ಅಜ್ ತಕ್