ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವೈದ್ಯಕಿಯ ಉದ್ದೇಶಕ್ಕಾಗಿ ತಂದೆಯೊಬ್ಬರು ತನ್ನ ಪುಟ್ಟ ಮಗನ ತೊಡೆಸಂದಿನ ಫೋಟೋ ಬಳಸಿದ್ದಕ್ಕೆ “ಹಾನಿಕಾರಕ ವಿಷಯ” ಎಂದು ಉಲ್ಲೇಖಿಸಿ ಅವರ ಗೂಗಲ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಪ್ರಸಂಗ ನಡೆದಿದೆ.
“ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ” ಆರೋಪ ಆಧಾರದಲ್ಲಿ ಪೋಲೀಸರ ತನಿಖೆ ಕೂಡ ನಡೆಯಿತು. ಇದು ನಡೆದಿದ್ದು ಫೆಬ್ರವರಿ 2021ಕ್ಕೂ ಹಿಂದೆ. ಕೋವಿಡ್ 19ರ ವ್ಯಾಪಕ ಹರಡುವಿಕೆಯಿಂದಾಗಿ ಜಗತ್ತು ಲಾಕ್ಡೌನ್ ಆಗಿತ್ತು. ಈ ವೇಳೆ ಆನ್ಲೈನ್ನಲ್ಲಿ ವೈದ್ಯಕಿಯ ಸಮಾಲೋಚನೆ ನಡೆಯುತ್ತಿದ್ದವು.
ಈ ಸಂದರ್ಭದಲ್ಲಿ ಆನ್ಲೈನ್ ಪರೀಕ್ಷೆಗಾಗಿ, ಸಮಾಲೋಚನೆ ನಡೆಸಲು ವೈದ್ಯರಿಗೆ ಕಳುಹಿಸುವ ಉದ್ದೇಶದಿಂದ ತನ್ನ ಅಂಬೆಗಾಲಿಡುವ ಮಗನ ಶಿಶ್ನದ ಫೋಟೋಗಳನ್ನು ತನ್ನ ಹೆಂಡತಿಯೊಂದಿಗೆ ಹಂಚಿಕೊಂಡಿದ್ದಕ್ಕೆ ತೊಂದರೆಗೆ ಸಿಲುಕಿದ್ದರು.
ವೈದ್ಯಕೀಯ ಸಮಸ್ಯೆಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ದಾಖಲೆ ಉದ್ದೇಶದಿಂದ ಮಾರ್ಕ್ನ ಫೋಟೋಗಳನ್ನು ಗೂಗಲ್ ಕ್ಲೌಡ್ಗೆ ಅಪ್ಲೋಡ್ ಮಾಡಲು ಬಳಸಲಾಗುತ್ತದೆ. ಈ ವೇಳೆ ಗೂಗಲ್ನ ರೀವ್ಯೂ ತಂಡದ ಅಲ್ಗಾರಿದಮ್ನಿಂದ ಮಾರ್ಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ.
ಮರುಪಡೆಯುವಿಕೆಗೆ ಯಾವುದೇ ಅವಕಾಶವೇ ಇರಲಿಲ್ಲ. ಪೋಲೀಸ್ ತನಿಖೆಯ ನಂತರ, ಮಾರ್ಕ್ ನಿರಪರಾಧಿ ಎಂದು ಕಂಡುಬಂದಿದೆ ಮತ್ತು ಅವನ ಮಗನ ಫೋಟೋಗಳನ್ನು ಲೈಂಗಿಕವಲ್ಲದ, ವೈದ್ಯಕಿಯ ಕಾರಣಗಳಿಗಾಗಿ ತೆಗೆದುಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಮಾರ್ಕ್ಗೆ ಕಾನೂನುಬದ್ಧವಾಗಿ ಕ್ಲೀನ್ ಚಿಟ್ ನೀಡಲಾಗಿದ್ದರೂ, ಅವರ ಎಲ್ಲಾ ಫೋಟೋ ಮತ್ತು ಹಿಸ್ಟರಿ ಹುಡುಕಾಟದ ತನಿಖೆಯ ಸಮಯದಲ್ಲಿ, ಈ ಘಟನೆಯ ಆರು ತಿಂಗಳ ಮೊದಲು ತೆಗೆದ ಮತ್ತೊಂದು ವಿಡಿಯೊ ಸಿಕ್ಕಿದೆ ಎಂದು ವಿವರಣೆ ನೀಡಿ ಗೂಗಲ್ ಖಾತೆ ಡಿಲೀಟ್ ಮಾಡುವ ನಿರ್ಧಾರಕ್ಕೆ ಅಂಟಿಕೊಳ್ಳಲಾಯಿತು.
ಕಂಪನಿಯ ಪ್ರಕಾರ, ಕ್ಲಿಪ್ನಲ್ಲಿ ಮಗು ತನ್ನ ತಾಯಿಯೊಂದಿಗೆ ಹಾಸಿಗೆಯಲ್ಲಿ ಮಲಗಿರುವುದು ಕಂಡುಬಂದಿದೆ. ಇದರ ನಂತರ, ಮಾರ್ಕ್ ಅವರು ತಮ್ಮ ಹೆಂಡತಿ ಮತ್ತು ಮಗನನ್ನು ಒಳಗೊಂಡ ಒಂದು ಸುಂದರ ಕ್ಷಣವನ್ನು ಸೆರೆಹಿಡಿಯಲು ಕ್ಲಿಪ್ ಅನ್ನು ರೆಕಾರ್ಡ್ ಮಾಡಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.