ಉತ್ತರ ಭಾರತ ಹಿಂದೂಗಳ ಪ್ರಮುಖ ಆಚರಣೆಗಳಲ್ಲಿ ಒಂದಾದ ಕರವಾಚೌತ್ನ್ನು ಸಲಿಂಗ ಕಾಮಿಗಳು ಆಚರಿಸುವಂತಹ ಜಾಹೀರಾತನ್ನು ಬಿತ್ತರಿಸಿದ್ದ ಡಾಬರ್ ಇಂಡಿಯಾ ಈ ವಿಚಾರವಾಗಿ ಕ್ಷಮೆ ಯಾಚಿಸಿದೆ.
ಸಂಭ್ರಮದ ದೀಪಾವಳಿಗೆ ಸಿಹಿಮಯ ಸ್ವಾಗತ
ಡಾಬರ್ ಇಂಡಿಯಾದ ಈ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಜಾಹೀರಾತನ್ನು ಹಿಂಪಡೆಯದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದರು.
ಇಂದು ಅವರು ಇಬ್ಬರು ಮಹಿಳೆಯರು ಕರವಾ ಚೌತ್ ಆಚರಿಸುತ್ತಿರುವುದನ್ನು ತೋರಿಸುತ್ತಾರೆ. ನಾಳೆ ಇಬ್ಬರು ಯುವಕರು ಮದುವೆಯಾಗುತ್ತಿರುವ ದೃಶ್ಯವನ್ನು ಬಿತ್ತರಿಸುತ್ತಾರೆ. ಇಂತಹ ಆಕ್ಷೇಪಾರ್ಹ ವಿಚಾರಗಳನ್ನು ಬಿತ್ತರಿಸಲು ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂದು ಮಿಶ್ರಾ ಹೇಳಿಕೆ ನೀಡಿದ್ದರು.
ಅತ್ಯಾಚಾರ ಆರೋಪ ಹೊತ್ತಿದ್ದ ಕಾಂಗ್ರೆಸ್ ಶಾಸಕನ ಪುತ್ರ ಕೊನೆಗೂ ಅರೆಸ್ಟ್
ಇದಾದ ಬಳಿಕ ಈ ಜಾಹೀರಾತನ್ನು ಸೋಶಿಯಲ್ ಮೀಡಿಯಾದ ಎಲ್ಲಾ ಖಾತೆಗಳಿಂದ ಡಾಬರ್ ಇಂಡಿಯಾ ಹಿಂಪಡೆದಿದೆ. ಮಾತ್ರವಲ್ಲದೇ ಹಿಂದೂ ಜನರ ಭಾವನೆಗೆ ಧಕ್ಕೆ ಬೀರುವಂತೆ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದೆ.
ಡಾಬರ್ ಇಂಡಿಯಾ ಫೆಮ್ ಫೇರ್ನೆಸ್ ಉತ್ಪನ್ನಕ್ಕಾಗಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿತ್ತು. 1.06 ನಿಮಿಷದ ಜಾಹೀರಾತಿನಲ್ಲಿ ಬ್ಲೀಚ್ ಹಾಕಿಕೊಂಡ ಯುವತಿಯರು ಪರಸ್ಪರ ಜರಡಿ ಹಿಡಿದು ಒಬ್ಬರ ಮುಖ ಒಬ್ಬರು ನೋಡಿದ್ದಾರೆ.
BIG NEWS: ‘ಸೂಟ್ ಕೇಸ್’ ಆರೋಪಕ್ಕೆ ತಿರುಗಿಬಿದ್ದ HDK; ವಚನ ಭ್ರಷ್ಟ ಕಳಂಕದ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ
ಕರವಾಚೌತ್ ಎಂಬುದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತಾ ಇಡೀ ದಿನ ಉಪವಾಸವಿದ್ದು ರಾತ್ರಿ ಜರಡಿಯಲ್ಲಿ ದೀಪವನ್ನಿಟ್ಟು ಚಂದ್ರನನ್ನೂ ನೋಡಿ ಬಳಿಕ ಅದೇ ಜರಡಿಯಲ್ಲಿ ಪತಿಯ ಮುಖವನ್ನು ನೋಡಿ ಪತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಪತಿಯೇ ಪತ್ನಿಗೆ ನೀರು ಕುಡಿಸುವ ಮೂಲಕ ಉಪವಾಸ ವೃತವನ್ನು ಅಂತ್ಯ ಮಾಡುತ್ತಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಎಫ್ಐಆರ್ ದಾಖಲಿಸುವ ಮುನ್ನ ಜಾಹೀರಾತನ್ನು ಹಿಂಪಡೆಯುವಂತೆ ನಾನು ಡಾಬರ್ ಇಂಡಿಯಾ ಕಂಪನಿಗೆ ವಾರ್ನಿಂಗ್ ನೀಡಿದ್ದೆ. ನಮ್ಮ ಮಾತಿಗೆ ಬೆಲೆ ನೀಡಿ ಜಾಹೀರಾತು ಹಿಂಪಡೆದಿದ್ದು ಮಾತ್ರವಲ್ಲದೇ ಡಾಬರ್ ಇಂಡಿಯಾ ಕ್ಷಮೆ ಕೂಡ ಕೇಳಿದೆ ಎಂದು ಮಿಶ್ರಾ ಹೇಳಿದ್ದಾರೆ.