alex Certify Commonwealth Games: ಪಂದ್ಯ ನಡೆಯುವಾಗಲೇ ಅವಘಡ; 2 ಗಂಟೆಗಳ ಕಾಲ ಸ್ಪರ್ಧೆ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Commonwealth Games: ಪಂದ್ಯ ನಡೆಯುವಾಗಲೇ ಅವಘಡ; 2 ಗಂಟೆಗಳ ಕಾಲ ಸ್ಪರ್ಧೆ ಸ್ಥಗಿತ

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ. ಈಗಾಗಲೇ ಭಾರತಕ್ಕೆ ಏಳು ಚಿನ್ನದ ಪದಕಗಳ ಲಭಿಸಿದ್ದು, ಪದಕಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಇದರ ಮಧ್ಯೆ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆ ನಡೆಯುತ್ತಿದ್ದ ತಾಣದಲ್ಲಿ ಅವಘಡ ಒಂದು ನಡೆದಿದೆ. ಇದರಿಂದಾಗಿ ಎರಡು ಗಂಟೆಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಸ್ಪರ್ಧೆ ನಡೆಯುತ್ತಿದ್ದ ತಾಣದಲ್ಲಿ ಆಡಿಯೋ ಸಾಮಗ್ರಿ ಒಂದು ಚಾವಣಿಯಿಂದ ಅಖಾಡಕ್ಕೆ ಬಿದ್ದ ಕಾರಣ ಅಡಚಣೆ ಎದುರಾಗಿದ್ದು, ಬಳಿಕ ಭದ್ರತಾ ಸಿಬ್ಬಂದಿ ಪ್ರೇಕ್ಷಕರನ್ನು ಹೊರ ಕಳುಹಿಸಿ ಅದನ್ನು ತೆರವುಗೊಳಿಸಿದ್ದಾರೆ. ಬಳಿಕ ಪಂದ್ಯಗಳು ಸುಸೂತ್ರವಾಗಿ ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...