alex Certify ಹುಲಿ ಬಾಲಕ್ಕೆ ಕೋಲಿನಿಂದ ಹೊಡೆದ ರೈತ; ಸಾವಿಗೆ ಕಾರಣವಾಯ್ತು ಕೆಟ್ಟ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ಬಾಲಕ್ಕೆ ಕೋಲಿನಿಂದ ಹೊಡೆದ ರೈತ; ಸಾವಿಗೆ ಕಾರಣವಾಯ್ತು ಕೆಟ್ಟ ಕುತೂಹಲ

ಅನಗತ್ಯವಾಗಿ ಯಾರನ್ನಾದರೂ ಸುಮ್ಮನೇ ಕೆಣಕುವುದು ಒಳ್ಳೆಯದಲ್ಲ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವರದಿಯಾದ ದುರಂತ ಘಟನೆಯೊಂದರಲ್ಲಿ ಹುಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಯಲು ರೈತರೊಬ್ಬರು ಹುಲಿಯ ಬಾಲವನ್ನು ಕೋಲಿನಿಂದ ಹೊಡೆದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಹುಲಿಯು ರೈತನ ಕುತ್ತಿಗೆಯ ಮೇಲೆ ದಾಳಿ ಮಾಡಿದ ಪರಿಣಾಮ ಕುತ್ತಿಗೆಯಲ್ಲಿ ಆಳವಾದ ಗಾಯವಾಯಿತು. ಈ ಮೂಲಕ ರೈತನ ಉತ್ಸಾಹ ದುರಂತದೆಡೆಗೆ ತಿರುಗಿತು. ಸಂತ್ರಸ್ತರನ್ನ 35 ವರ್ಷದ ಸಂತೋಷ್ ಎಂದು ಗುರುತಿಸಲಾಗಿದ್ದು ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ನಿಧನರಾದರು.

ಏತನ್ಮಧ್ಯೆ ಜನರು ಕಾಡಿಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಹುಲಿಗಳಿಗೆ ತೊಂದರೆಯಾಗದಂತೆ ವರ್ತಿಸಬೇಕೆಂದು ಅರಣ್ಯ ಇಲಾಖೆ ಕೇಳಿಕೊಂಡಿದೆ. ಇಲ್ಲಿಯವರೆಗೆ ಹುಲಿಯ ಕುರುಹು ಸಿಕ್ಕಿಲ್ಲ.

ಅರಣ್ಯ ಅಧಿಕಾರಿಗಳ ಪ್ರಕಾರ ಹುಲಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಯವಲ್ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿರಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...