alex Certify BIG NEWS: ಜನಪ್ರಿಯ ಹಾಗೂ ದುಬಾರಿ ಮದ್ದುಗಳ ಬೆಲೆ ಇಳಿಸಲು ಕೇಂದ್ರದ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜನಪ್ರಿಯ ಹಾಗೂ ದುಬಾರಿ ಮದ್ದುಗಳ ಬೆಲೆ ಇಳಿಸಲು ಕೇಂದ್ರದ ಚಿಂತನೆ

ಜನಪ್ರಿಯ ಹಾಗೂ ಭಾರೀ ಬೇಡಿಕೆಯಲ್ಲಿರುವ ಡಯಾಬೆಟಿಕ್-ವಿರೋಧಿ ಹಾಗೂ ಬ್ಯಾಕ್ಟೀರಿಯಾ-ನಿರೋಧಕ ಮದ್ದುಗಳ ಬೆಲೆಗಳನ್ನು ಕಡಿಮೆ ಮಾಡುವಂಥ ಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಅತ್ಯಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿ (ಎನ್‌ಎಲ್‌ಇಎಂ) ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

ಮಾರುಕಟ್ಟೆಯಲ್ಲಿ ಮಾರಾಟದ ಆಧಾರದ ಮೇಲೆ, ಅತಿ ಹೆಚ್ಚಿನ ಬೆಲೆಯ ಮತ್ತು ಜನಪ್ರಿಯ ಮದ್ದುಗಳಾದ ಡಯಾಬೆಟಿಕ್ ವಿರೋಧಿ ಮದ್ದು ಸಿಟಾಗ್ಲಿಪ್ಟಿನ್, ಬ್ಯಾಕ್ಟೀರಿಯಾ ನಿರೋಧಕ ಚುಚ್ಚುಮದ್ದು ಮೆರೋಪೆನೆಂ ಮತ್ತು ಸೆಫ್ಪೋಡಾಕ್ಸೈಮ್‌ಗಳ ಬೆಲೆಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಚಿಂತನೆ ನಡೆಸಿದೆ.

ತೃತೀಯ ಲಿಂಗಿಯ ಸ್ವಾವಲಂಬಿ ಬದುಕಿಗೊಂದು ತಿರುವು ಕೊಟ್ಟ ಫೇಸ್ಬುಕ್ ಪೋಸ್ಟ್

ಈ ಸಂಬಂಧ ಭಾರತೀಯ ಮದ್ದು ಸಂಶೋಧನಾ ಸಮಿತಿ (ಐಸಿಎಂಆರ್‌) ತಜ್ಞರ ತಂಡವೊಂದು 399 ಮದ್ದುಗಳ ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಿದ್ದು, ದೊಡ್ಡ ಬದಲಾವಣೆಗಳನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯಾ ಬರೆಸಿದ್ದಾರೆ ಎಂದು ನಿಕಟ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದಿಂದ ಚಾಲಿತವಾದ ಜನ್ ಔಷಧಿ ಕೇಂದ್ರಗಳಂಥ ಫಾರ್ಮಸಿ ಔಟ್ಲೆಟ್‌ಗಳ ನಿರ್ವಹಣೆ ಮಾಡುವ ಭಾರತೀಯ ಫಾರ್ಮಾ ಪಿಎಸ್‌ಯು ಬ್ಯೂರೋವನ್ನು ಆರೋಗ್ಯ ಸಚಿವಾಲಯ ಒಳಗೊಂಡು, ಕಳೆದ ಮೂರು ವರ್ಷಗಳಿಂದ ಮಾರಾಟವಾಗುತ್ತಿರುವ ಕನಿಷ್ಠ 12 ಮಾಲಿಕ್ಯೂಲ್‌ಗಳ ಮಾರಾಟದ ದತ್ತಾಂಶ ಕೇಳಿದೆ. ಹೃದ್ರೋಗ, ಡಯಾಬೆಟಿಕ್-ವಿರೋಧಿ, ಫಂಗಸ್-ನಿರೋಧಕ ಮತ್ತು ಆಂಟಿಬಯಾಟಿಕ್‌ ಹಾಗೂ ಗ್ಯಾಸ್ಟ್ರಿಕ್‌ನ ಮದ್ದುಗಳ ಮಾರಾಟದ ವಿಚಾರವಾಗಿ ಹೆಚ್ಚಿನ ಒತ್ತು ನೀಡಲಾಗಿದೆ.

ಬಿಪಿಪಿಐ ಸಲ್ಲಿಸಿರುವ ದತ್ತಾಂಶಗಳು ರಾಷ್ಟ್ರೀಯ ಫಾರ್ಮಕ್ಯೂಟಿಕಲ್ ಬೆಲೆ ನಿಗದಿ ಪ್ರಾಧಿಕಾರದ (ಎನ್‌ಪಿಪಿಎ) ಪರಿಶೀಲನೆಗೆ ಒಳಗಾಗಿದೆ. ಎನ್‌ಎಲ್‌ಇಎಂ ಪಟ್ಟಿಯಲ್ಲಿರುವ ಮದ್ದುಗಳ ಬೆಲೆಗಳನ್ನು ನಿಗದಿ ಮಾಡುವ ಅಧಿಕಾರ ಎನ್‌ಪಿಪಿಎಗೆ ಇದೆ.

ಈ ಮೇಲ್ಕಂಡ ವರ್ಗಗಳ ಮದ್ದುಗಳು ಭಾರೀ ಬೇಡಿಕೆಯಲ್ಲಿದ್ದು, ಗ್ರಾಹಕರು ತಮ್ಮ ಉಳಿತಾಯದ ಬಹುತೇಕ ಭಾಗವನ್ನು ಇವುಗಳ ಮೇಲೆ ವ್ಯಯಿಸುವ ಕಾರಣ ಅವುಗಳ ಬೆಲೆಯನ್ನು ನಿಯಂತ್ರಣಕ್ಕೆ ತರಲು ನಿರ್ಧರಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...