alex Certify BIG NEWS: ಸರ್ಕಾರಿ ನೌಕರರ ಸಂಘದಲ್ಲಿ ಭಿನ್ನಮತ ಸ್ಫೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಿ ನೌಕರರ ಸಂಘದಲ್ಲಿ ಭಿನ್ನಮತ ಸ್ಫೋಟ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಗೌರವಾಧ್ಯಕ್ಷ ಶಿವರುದ್ರಯ್ಯ ಮತ್ತು ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಬೆಂಬಲಿಗರ ನಡುವೆ ಪ್ರತ್ಯೇಕ ಬಣಗಳಾಗಿದ್ದು, ಒಳ ರಾಜಕಾರಣಕ್ಕೆ ನಾಂದಿ ಹಾಡಿದ ಆರೋಪ ಕೇಳಿಬಂದಿದೆ.

ಅಧ್ಯಕ್ಷ ಷಡಕ್ಷರಿ ಅವರು ಸಂಘವನ್ನು ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ. ನೌಕರರ ಬೇಡಿಕೆಗಳಿಗೆ ಷಡಕ್ಷರಿ ಸ್ಪಂದಿಸುತ್ತಿಲ್ಲ ಎಂದು ಷಡಕ್ಷರಿ ಅವರ ಕಾರ್ಯವೈಖರಿ ವಿರುದ್ಧ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಭಾನುವಾರ ನಡೆದ ಸಂಘದ ರಾಜ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸಂಘದ ಬೈಲಾ ಬದಲಾವಣೆ ಮಾಡಿ ಗೌರವಾಧ್ಯಕ್ಷ ಸ್ಥಾನದಿಂದ ಶಿವರುದ್ರಯ್ಯ ಅವರನ್ನು ಕಿತ್ತು ಹಾಕಿರುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ಹಳೆಯ ಬೈಲಾ ಪ್ರಕಾರವೇ ಸಭೆ ನಡೆಯುತ್ತಿದ್ದು, ತಮಗೆ ವೇದಿಕೆಯಲ್ಲಿ ಸ್ಥಳವಕಾಶ ನೀಡಬೇಕೆಂದು ಶಿವರುದ್ರಯ್ಯ ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ಷಡಕ್ಷರಿ, ಬೈಲಾಗೆ ತಡೆ ನೀಡಲಾಗಿದ್ದು, ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಇತ್ಯರ್ಥವಾಗುವವರೆಗೂ ವೇದಿಕೆಗೆ ಅವಕಾಶವಿಲ್ಲವೆಂದು ತಿಳಿಸಿದ್ದಾರೆ.

ಇದೇ ರೀತಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಘದ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಷಡಕ್ಷರಿ ಅವರು, ಕಾನೂನು ರೀತಿಯಲ್ಲಿ ಬೈಲಾ ರಚನೆ ಮಾಡಲಾಗಿದೆ. ಏಕಪಕ್ಷೀಯ ತೀರ್ಮಾನ ಕೈಗೊಂಡಿಲ್ಲ. ಸಂಘದಲ್ಲಿ ಭಿನ್ನಮತದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...