alex Certify ಭಾರಿ ಮೊತ್ತಕ್ಕೆ ಹರಾಜಾಯ್ತು ಕ್ರಿಪ್ಟೊಪಂಕ್​ ಡಿಜಿಟಲ್​ ಕಲಾಕೃತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮೊತ್ತಕ್ಕೆ ಹರಾಜಾಯ್ತು ಕ್ರಿಪ್ಟೊಪಂಕ್​ ಡಿಜಿಟಲ್​ ಕಲಾಕೃತಿ..!

ಕ್ರಿಪ್ಟೊಪಂಕ್​ ಎಂದು ಕರೆಯಲ್ಪಡುವ ಡಿಜಿಟಲ್​ ನಾನ್​ ಫಂಗಬಲ್​ ಕಲಾಕೃತಿ ಗುರುವಾರ ಬರೋಬ್ಬರಿ 11.8 ಮಿಲಿಯನ್​ ಡಾಲರ್​ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಹರಾಜು ಮನೆಯಾದ ಸೋಥೆಬಿ ಮಾಹಿತಿ ನೀಡಿದೆ.

ಕ್ರಿಪ್ಟೊಪಂಕ್ಸ್ ಅನ್ನೋದು 2017ರಲ್ಲಿ ಲಾರ್ವಾ ಲ್ಯಾಬ್ಸ್​ ನಿರ್ಮಿಸಿದ ಪಿಕ್ಸೆಲ್​ ಆರ್ಟ್​ ಪಾತ್ರಗಳ ಗುಂಪಾಗಿದೆ. ಸೋಥೇಬಿಯಲ್ಲಿ ಭಾರೀ ಮೊತ್ತಕ್ಕೆ ಹರಾಜಾದ ಕ್ರಿಪ್ಟೊಪಂಕ್​ ನೀಲಿ ಹಾಗೂ ಹಸಿರು ಚರ್ಮದ ಏಲಿಯನ್​ ರೀತಿಯಲ್ಲಿದ್ದು ಮೆಡಿಕಲ್​ ಮಾಸ್ಕ್​ ಧರಿಸಿದೆ.

ಸೋಥೆಬಿ ನಡೆಸಿದ ಆನ್​ಲೈನ್​ ಹರಾಜಿನಲ್ಲಿ ಕ್ರಿಪ್ಟೊಪಂಕ್​​ #7523 ಬರೋಬ್ಬರಿ 11,754,000 ಡಾಲರ್​ ಮೌಲ್ಯಕ್ಕೆ ಮಾರಾಟವಾಗಿದೆ. ಇದನ್ನು ಇಸ್ರೇಲ್​ ಉದ್ಯಮಿ ಶ್ಯಾಲೋಮ್​​ ಮೆಕೆಂಜಿ ಎಂಬವರು ಮಾರಾಟ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...