ಕ್ರಿಪ್ಟೊಪಂಕ್ ಎಂದು ಕರೆಯಲ್ಪಡುವ ಡಿಜಿಟಲ್ ನಾನ್ ಫಂಗಬಲ್ ಕಲಾಕೃತಿ ಗುರುವಾರ ಬರೋಬ್ಬರಿ 11.8 ಮಿಲಿಯನ್ ಡಾಲರ್ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಹರಾಜು ಮನೆಯಾದ ಸೋಥೆಬಿ ಮಾಹಿತಿ ನೀಡಿದೆ.
ಕ್ರಿಪ್ಟೊಪಂಕ್ಸ್ ಅನ್ನೋದು 2017ರಲ್ಲಿ ಲಾರ್ವಾ ಲ್ಯಾಬ್ಸ್ ನಿರ್ಮಿಸಿದ ಪಿಕ್ಸೆಲ್ ಆರ್ಟ್ ಪಾತ್ರಗಳ ಗುಂಪಾಗಿದೆ. ಸೋಥೇಬಿಯಲ್ಲಿ ಭಾರೀ ಮೊತ್ತಕ್ಕೆ ಹರಾಜಾದ ಕ್ರಿಪ್ಟೊಪಂಕ್ ನೀಲಿ ಹಾಗೂ ಹಸಿರು ಚರ್ಮದ ಏಲಿಯನ್ ರೀತಿಯಲ್ಲಿದ್ದು ಮೆಡಿಕಲ್ ಮಾಸ್ಕ್ ಧರಿಸಿದೆ.
ಸೋಥೆಬಿ ನಡೆಸಿದ ಆನ್ಲೈನ್ ಹರಾಜಿನಲ್ಲಿ ಕ್ರಿಪ್ಟೊಪಂಕ್ #7523 ಬರೋಬ್ಬರಿ 11,754,000 ಡಾಲರ್ ಮೌಲ್ಯಕ್ಕೆ ಮಾರಾಟವಾಗಿದೆ. ಇದನ್ನು ಇಸ್ರೇಲ್ ಉದ್ಯಮಿ ಶ್ಯಾಲೋಮ್ ಮೆಕೆಂಜಿ ಎಂಬವರು ಮಾರಾಟ ಮಾಡಿದ್ದಾರೆ.