ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ತನ್ನ ಯೋಜನೆಗಳ ಕುರಿತಂತೆ ಕೇಂದ್ರ ಸರ್ಕಾರ ಮಂಗಳವಾರದಂದು ಘೋಷಿಸಿದ್ದು, ಇದೇ ವೇಳೆ ರಿಸರ್ವ್ ಬ್ಯಾಂಕ್ ನಿಯಂತ್ರಿತವಾದ ಡಿಜಿಟಲ್ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
“ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ನಾಣ್ಯದ ಮಸೂದೆ, 2021” ಮೂಲಕ ಮೇಲ್ಕಂಡ ಬದಲಾವಣೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಸರ್ಕಾರ ತಿಳಿಸಿದೆ. ಈ ಮಸೂದೆಯನ್ನು ನವೆಂಬರ್ 29ರಿಂದ ಸಂಸತ್ತಿನಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದ ವೇಳೆ ಪರಿಚಯಿಸಲಾಗುವುದು.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೆ ಶಾಕ್: ಶಿಕ್ಷಕರ ವರ್ಗಾವಣೆ ಮುಂದೂಡಿಕೆ
ಮಸೂದೆ ಮೂಲಕ ಆರ್.ಬಿ.ಐ. ಮುಖಾಂತರ ಅಧಿಕೃತ ಡಿಜಿಟಲ್ ಕರೆನ್ಸಿ ಒಂದಕ್ಕೆ ಅಗತ್ಯವಿರುವ ಶಾಸನಾತ್ಮಕ ಚೌಕಟ್ಟನ್ನು ರಚಿಸುವುದೇ ಸರ್ಕಾರದ ಉದ್ದೇಶದಂತೆ ಕಾಣುತ್ತಿದೆ.
ಡಿಜಿಟಲ್ ನಾಣ್ಯಗಳ ಮೇಲೆ ನಿಷೇಧ ಹೇರುತ್ತಿರುವ ಮೊದಲ ದೇಶವೇನಲ್ಲ ಭಾರತ. ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಿರುವ ದೇಶಗಳ ಪಟ್ಟಿ ಇಂತಿದೆ:
ನೇಪಾಳ, ಚೀನಾ, ವಿಯೆಟ್ನಾಂ, ಕೊಲಂಬಿಯಾ, ರಷ್ಯಾ, ಈಕ್ವೆಡಾರ್, ಬೊಲಿವಿಯಾ, ಅಲ್ಜೀರಿಯಾ, ಈಜಿಪ್ಟ್, ಇಂಡೋನೇಷ್ಯಾ.