alex Certify ಲಗೇಜ್‌ ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಸಿಆರ್​ಪಿಎಫ್ ಯೋಧರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಗೇಜ್‌ ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಸಿಆರ್​ಪಿಎಫ್ ಯೋಧರು

ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಜಿಲ್ಲೆಯಲ್ಲಿ ತನ್ನ ಲಗೇಜನ್ನು ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಸಿಬ್ಬಂದಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬೆಲಾರಸ್​ ಮೂಲದ ಪ್ರವಾಸಿಗರು ಮೋಟಾರು ಸೈಕಲ್​ನಲ್ಲಿ ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಬನಿಹಾಲ್​ನ ಖಾಪೋರ್ರಾದಲ್ಲಿ ಅವರ ಲಗೇಜ್​ ಬ್ಯಾಗ್​ಕೆಳಗೆ ಬಿದ್ದಿದೆ. ಇದು ಸಿಆರ್​ಪಿಎಫ್​ನ ಯೋಧರು ಗಮನಿಸಿ, ಅದರ ಸವಾರನಿಗೆ ಬ್ಯಾಗ್​ ಹಿಂತಿರುಗಿಸಲು ಪ್ರಯತ್ನಿಸಿದ್ದಾರೆ.

ಮೊದಲು ಸಿಆರ್​ಪಿಎಫ್ ಯೋಧರು ಕಿಲೋಮೀಟರ್​ಗಳ ಮುಂದೆ ಇದ್ದ ಇತರ ಸಿಬ್ಬಂದಿಯನ್ನು ಸಂಪರ್ಕಿಸಿ, ಬ್ಯಾಗ್​ ಸುರಕ್ಷಿತವಾಗಿದೆ ಎಂದು ಪ್ರವಾಸಿಗರಿಗೆ ತಿಳಿಸುವಂತೆ ಕೇಳಿಕೊಂಡು ಬಳಿಕ ಅವರಿಗೆ ಹಸ್ತಾಂತರಿಸಿದರು.

ಆ ವಿದೇಶಿ ಪ್ರವಾಸಿಗರು ಸಿಆರ್​ಪಿಎಫ್​ಗೆ ಧನ್ಯವಾದ ಹೇಳುವ ಕಿರು ವಿಡಿಯೋವನ್ನು ಸಿಆರ್​ಪಿಎಫ್​ ತನ್ನ ಟ್ವಿಟರ್​ ಹ್ಯಾಂಡಲ್​ ಹಂಚಿಕೊಂಡಿದೆ.

ಪ್ರವಾಸಿ ತನ್ನ ಬ್ಯಾಗ್​ ಅನ್ನು ವಾಪಸ್​ ಪಡೆಯಲು ಹಿಂದಿರುಗಿದಾಗ, ಆತನಿಗೆ ಸೈನಿಕರು ಊಟವನ್ನು ನೀಡಿದ್ದರು. “ತುಂಬಾ ಧೈರ್ಯಶಾಲಿ ಸಿಆರ್​ಪಿಎಫ್​ ಯೋಧರಿಗೆ ಧನ್ಯವಾದಗಳು….. ಅವರು ನನ್ನ ಲಗೇಜನ್ನು ಹಿಂದಿರುಗಿಸಿದ್ದು ಮಾತ್ರವಲ್ಲದೆ ನನಗೆ ರುಚಿಕರವಾದ ಊಟವನ್ನೂ ನೀಡಿದರು. ಭಾರತವು ಆತಿಥ್ಯ ಮತ್ತು ಒಳ್ಳೆಯ ಜನರನ್ನು ಹೊಂದಿರುವ ಉತ್ತಮ ದೇಶವಾಗಿದೆ. ನಾನು ಇದನ್ನು ನೆನಪಿಸಿಕೊಳ್ಳುತ್ತೇನೆ. ಜೈ ಹಿಂದ್”​ ಎಂದು ಆ ಪ್ರವಾಸಿಗ ಹೇಳಿದ್ದು, ನೆಟ್ಟಿಗರನ್ನು ರೋಮಾಂಚನಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...