alex Certify ʼಲಾಕ್ ​ಡೌನ್ʼ​ ನಿಯಮ ಉಲ್ಲಂಘಿಸಿ ಅದ್ಧೂರಿ ಜನ್ಮ ದಿನಾಚರಣೆ: ಕುಣಿದು ಕುಪ್ಪಳಿಸಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ​ಡೌನ್ʼ​ ನಿಯಮ ಉಲ್ಲಂಘಿಸಿ ಅದ್ಧೂರಿ ಜನ್ಮ ದಿನಾಚರಣೆ: ಕುಣಿದು ಕುಪ್ಪಳಿಸಿದ ಯುವಕರು

ಕೋವಿಡ್​​ 19 ನಿಯಮಗಳನ್ನ ಉಲ್ಲಂಘಿಸಿ ಲಾಕ್​ಡೌನ್​ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಲು ಯುವಕರು ಒಂದೆಡೆ ಸೇರಿದ್ದು ಮಾತ್ರವಲ್ಲದೇ ಚಾಕು ಹಾಗೂ ಖಡ್ಗವನ್ನ ಹಿಡಿದು ಸಂಭ್ರಮಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದಿರುವ ಘಟನೆಯ ವಿಡಿಯೋ ವೈರಲ್​ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಲಾಕ್​ಡೌನ್​​ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಧ್ಯ ರಾತ್ರಿ ಹೊತ್ತಲ್ಲಿ ಆರಕ್ಕೂ ಹೆಚ್ಚು ಮಂದಿ ಸೇರಿ ಕೈಯಲ್ಲಿ ಚಾಕು ಹಾಗೂ ಖಡ್ಗಗಳನ್ನ ಹಿಡಿದು ನರ್ತಿಸಿದ್ದಾರೆ. ಬರ್ತಡೆ ನಿಮಿತ್ತ ಇಬ್ಬರ ದೊಡ್ಡ ಫೋಟೋಗಳು ಫ್ಲೆಕ್ಸ್​ಗಳಲ್ಲಿ ರಾರಾಜಿಸುತ್ತಿದ್ದವು. ಈ ಯುವಕರ ಗುಂಪಿನಲ್ಲಿ ಯಾರು ಕೂಡ ಫೇಸ್​ ಮಾಸ್ಕ್​ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿದ್ದು ಕೂಡ ಕಂಡುಬರಲಿಲ್ಲ.

ಈ ಘಟನೆ ಸಂಬಂಧ ಹಬೀಬ್​ನಗರ ಪೊಲೀಸ್​ ಠಾಣೆಯಲ್ಲಿ ಸೆಕ್ಷನ್​​ 25, ಸೆಕ್ಷನ್​ 188 ಹಾಗೂ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 9 ಮಂದಿಯನ್ನ ಬಂಧಿಸಲಾಗಿದ್ದು ಶೀಘ್ರದಲ್ಲೇ ಕೋರ್ಟ್​ಗೆ ಹಾಜರುಪಡಿಸೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...