ಎಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರಿಗೆ ಭಾನುವಾರ ಅಚ್ಚರಿ ಮತ್ತು ಆಘಾತ. 100 ಗ್ರಾಹಕರ ಖಾತೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಈ ರೀತಿ 13 ಕೋಟಿ ರೂಪಾಯಿ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿದೆ.
ಚೆನ್ನೈ ನಗರದ ಎಚ್.ಡಿ.ಎಫ್.ಸಿ. ಬ್ಯಾಂಕ್ ಶಾಖೆಗಳ ಪೈಕಿ ಕೆಲವು ಶಾಖೆಗಳಲ್ಲಿ ಈ ರೀತಿ ಆಗಿದೆ. ಬ್ಯಾಂಕ್‌ನ ಸಿಸ್ಟಮ್ಸ್ ಅಪ್‌ಗ್ರೇಡ್ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಈ ರೀತಿ ಆಗಿದೆ ಎಂದು ಬ್ಯಾಂಕ್ ಕೂಡಲೇ ಸಮಜಾಯಿಷಿ ನೀಡಿದೆ.
ಗ್ರಾಹಕರಿಗೆ ಹಣ ಜಮೆ ಆಗಿರುವ ಬಗ್ಗೆ ಎಸ್‌ಎಂಎಸ್ ಬಂದಾಗ ಅಚ್ಚರಿಪಟ್ಟಿದ್ದಾರೆ. ಅಲ್ಲದೆ, ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದೇ ಹೋದಾಗ ಆತಂಕಕ್ಕೆ ಒಳಗಾಗಿದ್ದಾರೆ. ಈ ವಿದ್ಯಮಾನದ ಕುರಿತು ಅನೇಕ ಗ್ರಾಹಕರು ಟ್ವಿಟರ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ವಿಧಾನಸಭೆ ಕಟ್ಟಡ ಅಗೆದ್ರೆ ಏನಾದ್ರೂ ಸಿಗಬಹುದು: ಬಿಜೆಪಿ ವಿರುದ್ಧ RLD ನಾಯಕ ಜಯಂತ್ ಚೌಧರಿ ಸಿಂಗ್ ವಾಗ್ದಾಳಿ
ಯಾವುದೇ ಕ್ರೆಡಿಟ್ ನಮೂದು ಇಲ್ಲದೆ ನನ್ನ ಪತ್ನಿಯ ಖಾತೆಯಲ್ಲಿನ ಬ್ಯಾಲೆನ್ಸ್ 1.23 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಯಾವುದೇ ಡೆಬಿಟ್ ನಮೂದನ್ನು ತೋರಿಸದೆ ಸಂಜೆಯ ವೇಳೆಗೆ ಹೆಚ್ಚುವರಿ ಮೊತ್ತವು ಕಣ್ಮರೆಯಾಯಿತು ಎಂದು ಗ್ರಾಹಕರಲ್ಲಿ ಒಬ್ಬರು ಟ್ವೀಟ್ ಮಾಡಿದ್ದಾರೆ.
ಈ ರೀತಿ ಹಲವರು ಟ್ವೀಟ್ ಮಾಡಿದ್ದಾರೆ. ಮೇ 28 ರ ಶನಿವಾರ ರಾತ್ರಿ ವಾಡಿಕೆಯ ಸಿಸ್ಟಮ್ ಪ್ಯಾಚ್ ಅಪ್‌ಗ್ರೇಡ್ ಚಟುವಟಿಕೆಯ ನಂತರ ಕೆಲವು ಗ್ರಾಹಕರ ಖಾತೆಗಳಲ್ಲಿ ಪ್ರದರ್ಶನ ದೋಷ ಕಂಡುಬಂದಿದೆ. ಈ ಖಾತೆಗಳಲ್ಲಿ ಡೆಬಿಟ್ ಬ್ಲಾಕ್ ಅನ್ನು ಇರಿಸಲಾಗಿತ್ತು. ಅವುಗಳಲ್ಲಿ ಹೆಚ್ಚಿನವುಗಳನ್ನು ಈಗ ತೆಗೆದುಹಾಕಲಾಗಿದೆ” ಬ್ಯಾಂಕ್ ವಕ್ತಾರರು ತಿಳಿಸಿದ್ದಾರೆ.