ಸದ್ಯದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೂರೇ ಹೆಸರು ವಿಶ್ವಾದ್ಯಂತ ಜನಪ್ರಿಯ. ಫುಟ್ಬಾಲ್ ಪ್ರಿಯರು ತ್ರಿಮೂರ್ತಿಗಳಂತೆ ಈ ಮೂವರ ಸ್ಮರಣೆ ಮಾಡುತ್ತಿದ್ದಾರೆ. ಒಂದು ’ಮೆಸ್ಸಿ’, ಎರಡು ’ ಕ್ರಿಸ್ಟಿಯಾನೊ ರೊನಾಲ್ಡೊ’, ಮೂರು ’ ನೇಮರ್.
ಈ ಪೈಕಿ ರೊನಾಲ್ಡೊಗೆ ಹೆಣ್ಣುಮಕ್ಕಳೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಯಾಕೆಂದರೆ ಸ್ಮಾರ್ಟ್ ಆಗಿ ಕಾಣುವ ರೊನಾಲ್ಡೊಗೆ 36 ವರ್ಷವಾಗಿದ್ದರೂ ಥೇಟ್ 20ರ ಯುವಕನಂತೆ ಚುರುಕಾದ ವ್ಯಕ್ತಿತ್ವ. ಜತೆಗೆ ಆಟದಲ್ಲಿ ಕಾಲ್ಚಳಕ ಕೂಡ ಬಹಳ ವೇಗ. ಆತನ ಚುರುಕುತನದ ಆಟದಿಂದ ಆತ ಬಾರಿಸಿರುವ ಗೋಲುಗಳು ಹೊಸ ದಾಖಲೆಗಳನ್ನೇ ಸೃಷ್ಟಿ ಮಾಡಿವೆ.
ತರಬೇತಿ ವೇಳೆ ಆಯತಪ್ಪಿ ಬಿದ್ದ ಜಿಮ್ನಾಸ್ಟ್ ಬೆನ್ನುಹುರಿಗೆ ಗಂಭೀರ ಹಾನಿ..!
ಹೀಗಿರುವ ರೊನಾಲ್ಡೊನ ಮೇಣದ ಪ್ರತಿಮೆಯೊಂದು ಖ್ಯಾತ ವಸ್ತು ಸಂಗ್ರಹಾಲಯದ ’ಮ್ಯಾಡೇಮ್ ಟುಸ್ಸೇಡ್ಸ್’ನಲ್ಲಿ ಅನಾವರಣಗೊಂಡಿತು. ಮೂಲತಃ ಲಂಡನ್‌ನ ಈ ವಸ್ತು ಸಂಗ್ರಹಾಲಯದ ಮೊದಲ ಮಳಿಗೆಯೊಂದು ದುಬೈನಲ್ಲಿ ಇತ್ತೀಚೆಗೆ ತೆರೆಯಿತು. ಅಲ್ಲಿರುವ ಹೊಸ ರೊನಾಲ್ಡೊ ಪ್ರತಿಮೆಗೆ ತೊಡಿಸಲಾಗಿರುವ ಜರ್ಸಿ ಅಥವಾ ಟೀಮ್ ಶರ್ಟ್ ತಪ್ಪಾಗಿದೆ!
ಹೌದು, ಈ ಮುನ್ನ ರೊನಾಲ್ಡೊ ಆಡುತ್ತಿದ್ದ ಇಟಲಿಯ ಜುವೆಂಟಸ್ ತಂಡದ ಜರ್ಸಿಯನ್ನು ಮೇಣದ ಪ್ರತಿಮೆಗೆ ತೊಡಿಸಲಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರ ಪಠಣ ಮಾಡಿ ದಾಖಲೆ ಸೃಷ್ಟಿಸಿದ ಒಡಿಶಾ ಬಾಲೆ
ಕಳೆದ ಆಗಸ್ಟ್‌ನಲ್ಲೇ ರೊನಾಲ್ಡೊ ಅವರು ತಮ್ಮ ತವರು ಕ್ಲಬ್ ’ ಮ್ಯಾಂಚೆಸ್ಟರ್ ಯುನೈಟೆಡ್’ಗೆ ಮರಳಿದ್ದಾರೆ. ಅದು ಕೂಡ ಇಂಗ್ಲೀಷ್ ಪ್ರೀಮಿಯರ್ ಲೀಗ್ ಅವಧಿಯಲ್ಲಿ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದರ ಜರ್ಸಿಯೇ ಬೇರೆ ಇದೆ.
ಜರ್ಸಿ ಬದಲಾವಣೆಗೆ ಫ್ಯಾನ್ಸ್ ಗರಂ ಆಗಿರುವುದನ್ನು ಅರಿತ ವಸ್ತು ಸಂಗ್ರಹಾಲಯವು ಪ್ರಕಟಣೆ ಬಿಡುಗಡೆ ಮಾಡಿದ್ದು, ಶೀಘ್ರವೇ ಜರ್ಸಿ ಸರಿಪಡಿಸುವೆವು ಎಂದಿದೆ.
ವೇಗವಾಗಿ ಬದಲಾಗುತ್ತಿರುವ ಕ್ರೀಡಾ ಜಗತ್ತಿನಲ್ಲಿ ಕ್ರೀಡಾಪಟುಗಳು ಕೂಡ ಬಹಳ ವೇಗವಾಗಿ ತಂಡಗಳನ್ನು ಬದಲಾಯಿಸುತ್ತಿರುತ್ತಾರೆ. ಇದು ನಮ್ಮ ಗಮನಕ್ಕೆ ತಡವಾಗಿ ಬಂದಿದೆ ಎಂದು ಫ್ಯಾನ್ಸ್ ಬಳಿ ಕ್ಷಮೆ ಯಾಚಿಸಿದ್ದಾರೆ.