alex Certify ಫುಟ್ಬಾಲ್ ಪಂದ್ಯ ವೀಕ್ಷಿಸಲು ಉದ್ಯಮಿ ಖರೀದಿಸಿದ ಟಿಕೆಟ್ ಬೆಲೆ 22 ಕೋಟಿ ರೂಪಾಯಿಗಳೆಂದರೆ ನೀವು ನಂಬಲೇಬೇಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಪಂದ್ಯ ವೀಕ್ಷಿಸಲು ಉದ್ಯಮಿ ಖರೀದಿಸಿದ ಟಿಕೆಟ್ ಬೆಲೆ 22 ಕೋಟಿ ರೂಪಾಯಿಗಳೆಂದರೆ ನೀವು ನಂಬಲೇಬೇಕು….!

ಕ್ರಿಸ್ಟಿಯಾನೋ ರೊನಾಲ್ಡೋ ವರ್ಸಸ್ ಲಿಯೋನೆಲ್ ಮೆಸ್ಸಿ ಅರ್ಥಾತ್ ರಿಯಾದ್ ಅಲ್ ಸ್ಟಾರ್ XI vs ಪಿಎಸ್‌ಜಿ ನಡುವೆ ಪುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸೌದಿ ಅರೇಬಿಯಾದ ಉದ್ಯಮಿಯೊಬ್ಬರು ಈ ಪಂದ್ಯದ ಟಿಕೆಟನ್ನು ಬರೋಬ್ಬರಿ 22 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದು, ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಟಿಕೆಟ್ ಎಂದು ಇದು ದಾಖಲಾಗಿದೆ.

ಸೌದಿ ಅರೇಬಿಯಾದ ಎಹ್ಸಾನ್ ಚಾರಿಟಿಗೆ ಸಹಾಯಾರ್ಥ ಈ ವಿಐಪಿ ಟಿಕೆಟ್ ಅನ್ನು ಹರಾಜು ಮಾಡಲು ಮುಂದಾಗಿದ್ದು ಇದಕ್ಕೆ 220,000 £ ನಿಗದಿಪಡಿಸಲಾಗಿತ್ತು. ಇದನ್ನು ಉದ್ಯಮಿ ಮುಶ್ರಫ್ ಬಿನ್ ಅಹಮದ್ ಅಲ್ ಗಾಮ್ದಿ £2.2 ಮಿಲಿಯನ್ (22 ಕೋಟಿ ರೂಪಾಯಿ) ಗಳಿಗೆ ಖರೀದಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...