alex Certify BIG NEWS: ಒಡಿಶಾ ಭೀಕರ ರೈಲು ಅಪಘಾತದ ಬೆನ್ನಲ್ಲೇ ಸಮಯಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಘೋರ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಡಿಶಾ ಭೀಕರ ರೈಲು ಅಪಘಾತದ ಬೆನ್ನಲ್ಲೇ ಸಮಯಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಘೋರ ದುರಂತ

ಒಡಿಶಾದಲ್ಲಿ ಭೀಕರ ರೈಲು ಅಪಘಾತ ದುರಂತದ ಬೆನ್ನಲ್ಲೇ ತಮಿಳುನಾಡಿನಲ್ಲಿ ಸಂಭವನೀಯ ರೈಲು ದುರಂತವೊಂದು ಸಮಯಪ್ರಜ್ಞೆಯಿಂದ ತಪ್ಪಿದೆ.

ಶೆಂಗೊಟ್ಟೈನಲ್ಲಿ ಕೊಲ್ಲಂ ಜಂಕ್ಷನ್-ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ (16102) ರೈಲಿನ ಚಕ್ರದ ಮೇಲಿರುವ ಕೋಚ್‌ನ ತಳದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದನ್ನು ರೈಲ್ವೆ ಸಿಬ್ಬಂದಿ ಭಾನುವಾರ ಗಮನಿಸಿದ್ದರಿಂದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಾನಿ ವರದಿಯಾದ ನಂತರ ನಿರ್ದಿಷ್ಟ ಕೋಚ್ (S3) ರೈಲಿನಿಂದ ಬೇರ್ಪಟ್ಟಿತು. ಒಂದೂವರೆ ಗಂಟೆಗಳ ವಿಳಂಬದ ನಂತರ ರೈಲು ಮಧುರೈಗೆ ಹೊರಟಿತು. ಅಲ್ಲಿ ಮತ್ತೊಂದು ಕೋಚ್ ಅನ್ನು ಜೋಡಿಸಲಾಯಿತು.

ಎಸ್ 3 ಕೋಚ್‌ನ ಪ್ರಯಾಣಿಕರನ್ನು ಮತ್ತೊಂದು ಕೋಚ್‌ನಲ್ಲಿ ಪ್ರಯಾಣಿಸಲು ಸೂಚಿಸಲಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿರುಕು ಗಮನಿಸದೆ ಹೋಗಿದ್ದರೆ, ನಾವು ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿದ್ದೆವು ಎಂದು ರೈಲ್ವೆ ಕಾರ್ಮಿಕರೊಬ್ಬರು ಹೇಳಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...