ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ಕಿತ್ತಾಟ ಇದೀಗ ಮತ್ತೊಂದು ರೂಪವನ್ನೇ ಪಡೆದಿದ್ದು ದಲಿತ ಸಿಎಂ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಪಿ. ಯೋಗೀಶ್ವರ್ ಸಿದ್ದರಾಮಯ್ಯ ಸಿಎಂ ಆದ ಕಾಲದಿಂದಲೇ ಕಾಂಗ್ರೆಸ್ನಲ್ಲಿ ದಲಿತ ಸಿಎಂ ಕೂಗು ಇತ್ತು ಎಂದು ಹೇಳಿದ್ದಾರೆ.
ನಾಯಕತ್ವ ವಿಚಾರದಲ್ಲಿ ನಮ್ಮ ಪಕ್ಷದ ವಾದ – ವಿವಾದಗಳೆಲ್ಲ ಮುಗಿದಿದೆ. ಜಡ್ಜ್ಮೆಂಟ್ಗಾಗಿ ಕಾಯುತ್ತಿದ್ದೇವೆ. ಈಗ ಕಾಂಗ್ರೆಸ್ನಲ್ಲಿ ನಾಯಕತ್ವದ ಹೋರಾಟ ಶುರುವಾಗಿದೆ. ಕಾಂಗ್ರೆಸ್ನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ಸಿದ್ದರಾಮಯ್ಯ ಸಿಎಂ ಆದ ಸಂದರ್ಭದಲ್ಲಿ ದಲಿತ ಸಿಎಂ ಕೂಗು ಇತ್ತು. ಈಗ ಮತ್ತೆ ಶುರುವಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಏನಾಗುತ್ತೆ ನೋಡೋಣ ಎಂದು ಹೇಳಿದ್ರು.
ಇನ್ನು ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಪಾಪ ಶಿವಕುಮಾರ್ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಆದರೆ ಸಿದ್ದರಾಮಯ್ಯ ಇರೋವರೆಗೂ ಡಿಕೆಶಿಗೆ ಈ ಅವಕಾಶ ಕೊಡೋದಿಲ್ಲ. ಡಿ.ಕೆ. ಶಿವಕುಮಾರ್ಗೆ ಶಾಸಕರ ಬೆಂಬಲವೂ ಇದ್ದಂತೆ ಕಾಣ್ತಿಲ್ಲ ಎಂದು ಹೇಳಿದ್ರು.