alex Certify Viral Video: ಎಟಿಎಂನಲ್ಲಿ ಸಗಣಿ ಹಾಕಿದ ಹಸು; ಮೂಗು ಮುಚ್ಚಿ ಹಣ ಪಡೆದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಎಟಿಎಂನಲ್ಲಿ ಸಗಣಿ ಹಾಕಿದ ಹಸು; ಮೂಗು ಮುಚ್ಚಿ ಹಣ ಪಡೆದ ಗ್ರಾಹಕ

ಹಸುವೊಂದು ಎಟಿಎಂ ಬೂತ್​ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ ಎನಿಸುತ್ತದೆ, ಈ ಹಸುವು ಇತರ ಹಸುಗಳೊಂದಿಗೆ ಅದರ ನಾನ್​ ಎಸಿ ಸ್ಥಳಕ್ಕಿಂತ​ ಹೆಚ್ಚಾಗಿ ಎಸಿಯಲ್ಲಿರಲು ಇಷ್ಟಪಡುತ್ತದೆ ಎಂದು ತೋರುತ್ತದೆ.

ಈ ಘಟನೆ ಮಧ್ಯಪ್ರದೇಶದ ರೇವಾ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತರೊಬ್ಬರು ಟ್ವಿಟ್ಟರ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಎಟಿಎಂ ಯಂತ್ರದಿಂದ ಹಣವನ್ನು ಹಿಂಪಡೆಯಲು ತೊಂದರೆ ಅನುಭವಿಸುತ್ತಿರುವುದನ್ನು ಕಾಣಬಹುದು. ನೆಲದ ಮೇಲೂ ದನದ ಸಗಣಿ ಆವರಿಸಿದ್ದು, ಎಟಿಎಂ ಯಂತ್ರದ ಮುಂದೆ ದನ ಕೂತಿದೆ.

ಮನುಷ್ಯ ತನ್ನ ಟಿ ಶರ್ಟ್​ ನಿಂದ ಮೂಗನ್ನು ಮುಚ್ಚಿಕೊಳ್ಳುತ್ತಿರುವುದನ್ನು ಕಾಣಬಹುದು ಮತ್ತು ಹಣವನ್ನು ಹಿಂಪಡೆಯಲು ಚಿಕ್ಕ ಜಾಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾನೆ. ಈ ವಿಡಿಯೋವನ್ನು ವ್ಯಕ್ತಿಯ ಸೋದರಳಿಯ ಚಿತ್ರೀಕರಿಸಿದ್ದಾರೆ.

ಈ ವಿಡಿಯೊ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಹಸುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವು ನೆಟಿಜನ್​ಗಳು ಇದು ಅನಾರೋಗ್ಯದ ಕಾರಣದಿಂದ ಅತಿಸಾರವಾಗಿರಬಹುದು ಮತ್ತು ಅದನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಕೆಲವರು ಹಾಸ್ಯದ ಕಾಮೆಂಟ್​ ಕೂಡ ಮಾಡಿದ್ದಾರೆ.

— Shubhankar Mishra (@shubhankrmishra) September 22, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...