alex Certify ಹಸುವಿನ ಸಗಣಿ, ಗೋಮೂತ್ರದ ನೆರವಿನಿಂದ ದೇಶದ ಆರ್ಥಿಕತೆ ಸದೃಢ: ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿನ ಸಗಣಿ, ಗೋಮೂತ್ರದ ನೆರವಿನಿಂದ ದೇಶದ ಆರ್ಥಿಕತೆ ಸದೃಢ: ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿಕೆ

ಧಾರ್ಮಿಕ ವಿಚಾರಗಳು, ಸನಾತನ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವನ್ನು ಅರಿತುಕೊಂಡು ಆಚರಿಸಿದರೆ, ಖಂಡಿತವಾಗಿಯೂ ಮಾನವ ವಿಕಾಸಕ್ಕೆ ಸಹಕಾರಿ. ಅದರಲ್ಲೂ ಗೋವಿನ ಪಾಲನೆ ಜತೆಗೆ ಹೈನುಗಾರಿಕೆ ಉದ್ಯಮವನ್ನು ಗಂಭೀರವಾಗಿ ಪರಿಗಣಿಸಿದವರು ಹಾಲಿನ ಕ್ರಾಂತಿಯನ್ನೇ ಮಾಡಿದ್ದಾರೆ. ಅದರ ಬಗ್ಗೆ ಇತಿಹಾಸದಲ್ಲಿದೆ.

ಗೋವಿನ ಸಗಣಿ ಹಾಗೂ ಮೂತ್ರದ ಬಗ್ಗೆ ಇತ್ತೀಚೆಗೆ ಹೆಚ್ಚು ಪ್ರಚಾರ ಆಗುತ್ತಿದೆ. ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ.

ಭಾರತೀಯ ಪಶುವೈದ್ಯಕೀಯ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ವೇಳೆ ಸಿಎಂ ಚೌಹಾಣ್‌, ’’ಈ ದೇಶದ ಆರ್ಥಿಕತೆ ಸದೃಢಗೊಳ್ಳಲು ಮತ್ತು ದೇಶವು ಆರ್ಥಿಕವಾಗಿ ಸ್ವತಂತ್ರವಾಗಲು ಹಸುವಿನ ಸಗಣಿ ಮತ್ತು ಗೋಮೂತ್ರ ಬಹಳ ಉಪಕಾರಿ,’’ ಎಂದಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಆಟಗಾರರ ಅತಿರೇಕದ ವರ್ತನೆ: ಬೂಟ್ ಗಳಲ್ಲಿ ಬಿಯರ್ ಸೇವನೆ; ಸಂಭ್ರಮಾಚರಣೆ ವಿಡಿಯೋ ವೈರಲ್

ಈಗಾಗಲೇ ಮಧ್ಯಪ್ರದೇಶದ ಸರಕಾರಿ ಚಿತಾಗಾರಗಳು ಮತ್ತು ಕೆಲವು ಸಂಘ-ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಚಿತಾಗಾರಗಳಲ್ಲಿ ಕಟ್ಟಿಗೆಗಳ ಬದಲಿಗೆ ಒಣಗಿದ ಸಗಣಿಯ ದಪ್ಪನೆಯ ಬೆರಣಿಗಳನ್ನೇ ಸುಡಲು ಬಳಸಲಾಗುತ್ತಿದೆ. ಇದರಿಂದ ಕಟ್ಟಿಗೆ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಮರಗಳನ್ನು ಕಡಿಯುವುದು ಕೂಡ ಕಡಿಮೆ ಆಗಲಿದೆ ಎಂದು ಸಿಎಂ ಚೌಹಾಣ್‌ ಮತ್ತೊಂದು ಭಾಷಣದಲ್ಲಿ ತಿಳಿಸಿದ್ದಾರೆ.

ಸಿಎಂ ಚೌಹಾಣ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಹಲವರು ಕೊರೊನಾ ಹೊಡೆತದಿಂದ ಆರ್ಥಿಕತೆ ಪುಟಿದೇಳಲು ಹಲವಾರು ಯೋಜನೆಗಳ ಬಗ್ಗೆ ಹಗಲು -ರಾತ್ರಿ ಲಕ್ಷಾಂತರ ಮಂದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಸ್ವಲ್ಪ ವಿಚಾರ ಮಾಡಿಕೊಂಡು ಸಿಎಂ ಚೌಹಾಣ್‌ ಮಾತನಾಡಬೇಕು ಎಂದು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...