ಕೋವಿಶೀಲ್ಡ್‌ನಿಂದಾಗಿ ಕೋವಿಡ್-19 ಸೋಂಕಿನಿಂದ 93%ನಷ್ಟು ರಕ್ಷಣೆ ಸಿಗಲಿದ್ದು, ಮರಣ ಪ್ರಮಾಣದಲ್ಲಿ 98%ನಷ್ಟು ತಗ್ಗಲಿದೆ ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ಅಧ್ಯಯನದ ವರದಿ ತಿಳಿಸಿದ್ದು, ಇದೇ ವಿಷಯವನ್ನು ಸರ್ಕಾರ ಪುನರುಚ್ಛರಿಸಿದೆ.
ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪೌಲ್, 15 ಲಕ್ಷ ವೈದ್ಯರು ಹಾಗೂ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಮೇಲೆ ಮಾಡಿರುವ ಅಧ್ಯಯನ ಉಲ್ಲೇಖಿಸಿ ಮಾತನಾಡಿದ್ದಾರೆ.
ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದರೆ ಪತ್ನಿಗೆ ಈ ಉಡುಗೊರೆ ನೀಡ್ತಾರಂತೆ ಭಾರತೀಯ ಹಾಕಿ ತಂಡದ ನಾಯಕ..!
ಕೋವಿಡ್-19 ವಿರುದ್ಧ ಲಸಿಕೆಗಳು ಪೂರ್ಣವಾಗಿ ಗ್ಯಾರಂಟಿ ಕೊಡದೇ ಇದ್ದರೂ, ಸೋಂಕು ತಗುಲುವ ಸಾಧ್ಯತೆಯನ್ನು ತಗ್ಗಿಸುತ್ತದೆ ಎಂದ ಪೌಲ್, “ದಯವಿಟ್ಟು ಜಾಗರೂಕರಾಗಿದ್ದು, ಎಚ್ಚರಿಕೆಯಿಂದ ಇರಿ ಎಂದು ತಿಳಿಸಲು ಇಚ್ಛಿಸುತ್ತೇನೆ. ನಮ್ಮ ಲಸಿಕೆಗಳ ಮೇಲೆ ನಂಬಿಕೆ ಇಟ್ಟು, ಮುಂಬರುವ ವಾರಗಳು ಹಾಗೂ ತಿಂಗಳುಗಳಲ್ಲಿ ಎಚ್ಚರಿಕೆಯಿಂದ ಇರಿ” ಎಂದು ತಿಳಿಸಿದ್ದಾರೆ.