alex Certify ಕೊರೊನಾದಿಂದ ಗರ್ಭಪಾತ ಪ್ರಮಾಣ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗರ್ಭಪಾತ ಪ್ರಮಾಣ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ಮಾಹಿತಿ

ಐದು ದಿನಗಳ ಭ್ರೂಣಗಳು ಅಭಿವೃದ್ಧಿಪಡಿಸುವ ಗ್ರಾಹಕಗಳಿಂದಾಗಿ ಕೋವಿಡ್​ 19 ವೈರಸ್​ಗಳಿಗೆ ಭ್ರೂಣಗಳನ್ನು ಪ್ರವೇಶಿಸಲು ಸುಲಭ ಮಾರ್ಗ ಸಿಕ್ಕಂತಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಹಾಗೂ ಎನ್​ಐಆರ್​ಆರ್​ಹೆಚ್​​ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಪ್ರಯೋಗಾಲಯದಲ್ಲಿ ನಡೆಯುವ ಐವಿಎಫ್​ ತಂತ್ರಜ್ಞಾನದ ಸಮಯದಲ್ಲಿ ಹಾಗೂ ಕೋವಿಡ್​ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ಸೋಂಕು ತಗಲುತ್ತದೆ. ಇದರಿಂದಾಗಿ ಗರ್ಭಪಾತವಾಗುವ ಅಪಾಯ ಹೆಚ್ಚಾಗಿರುತ್ತದೆ. ಇದು ಮಾತ್ರವಲ್ಲದೇ ನೈಸರ್ಗಿಕವಾಗಿ ಅಥವಾ ಐವಿಎಫ್​ ತಂತ್ರಜ್ಞಾನದ ಗರ್ಭಿಣಿಯಾದವರಲ್ಲಿ ಗರ್ಭಪಾತದ ಅಪಾಯವನ್ನ ಕೋವಿಡ್​ ವೈರಸ್​ಗಳು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಈ ಅಧ್ಯಯನವು ಹೇಳಿದೆ.

ರೆಸೆಪ್ಟರ್​ ಅನ್ನೋದು ಒಂದು ನಿಖರವಾದ ಪ್ರೋಟಿನ್​​ ಆಗಿದ್ದು ಇದು ವೈರಸ್​​​ಗೆ ಭ್ರೂಣ ಪ್ರವೇಶ ಮಾಡುವ ಮಾರ್ಗವಾಗಿದೆ. ಈ ರೆಸೆಪ್ಟರ್​ಗಳ ಮೂಲಕವೇ ಕೊರೊನಾ ವೈರಸ್​​​​ ಶ್ವಾಸಕೋಶಗಳಿಗೂ ಹಾನಿ ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...