ಐದು ದಿನಗಳ ಭ್ರೂಣಗಳು ಅಭಿವೃದ್ಧಿಪಡಿಸುವ ಗ್ರಾಹಕಗಳಿಂದಾಗಿ ಕೋವಿಡ್ 19 ವೈರಸ್ಗಳಿಗೆ ಭ್ರೂಣಗಳನ್ನು ಪ್ರವೇಶಿಸಲು ಸುಲಭ ಮಾರ್ಗ ಸಿಕ್ಕಂತಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಎನ್ಐಆರ್ಆರ್ಹೆಚ್ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಲಭ್ಯವಾಗಿದೆ.
ಪ್ರಯೋಗಾಲಯದಲ್ಲಿ ನಡೆಯುವ ಐವಿಎಫ್ ತಂತ್ರಜ್ಞಾನದ ಸಮಯದಲ್ಲಿ ಹಾಗೂ ಕೋವಿಡ್ ಸೋಂಕಿತ ತಾಯಿಯಿಂದ ಭ್ರೂಣಕ್ಕೆ ಸೋಂಕು ತಗಲುತ್ತದೆ. ಇದರಿಂದಾಗಿ ಗರ್ಭಪಾತವಾಗುವ ಅಪಾಯ ಹೆಚ್ಚಾಗಿರುತ್ತದೆ. ಇದು ಮಾತ್ರವಲ್ಲದೇ ನೈಸರ್ಗಿಕವಾಗಿ ಅಥವಾ ಐವಿಎಫ್ ತಂತ್ರಜ್ಞಾನದ ಗರ್ಭಿಣಿಯಾದವರಲ್ಲಿ ಗರ್ಭಪಾತದ ಅಪಾಯವನ್ನ ಕೋವಿಡ್ ವೈರಸ್ಗಳು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಈ ಅಧ್ಯಯನವು ಹೇಳಿದೆ.
ರೆಸೆಪ್ಟರ್ ಅನ್ನೋದು ಒಂದು ನಿಖರವಾದ ಪ್ರೋಟಿನ್ ಆಗಿದ್ದು ಇದು ವೈರಸ್ಗೆ ಭ್ರೂಣ ಪ್ರವೇಶ ಮಾಡುವ ಮಾರ್ಗವಾಗಿದೆ. ಈ ರೆಸೆಪ್ಟರ್ಗಳ ಮೂಲಕವೇ ಕೊರೊನಾ ವೈರಸ್ ಶ್ವಾಸಕೋಶಗಳಿಗೂ ಹಾನಿ ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.