alex Certify BIG NEWS: ಕೋವಿಡ್​ ಲಸಿಕೆಗಳ ರಫ್ತಿಗೆ ಕೇಂದ್ರ ಸರ್ಕಾರದಿಂದ ʼಗ್ರೀನ್‌ ಸಿಗ್ನಲ್‌ʼ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್​ ಲಸಿಕೆಗಳ ರಫ್ತಿಗೆ ಕೇಂದ್ರ ಸರ್ಕಾರದಿಂದ ʼಗ್ರೀನ್‌ ಸಿಗ್ನಲ್‌ʼ ಸಾಧ್ಯತೆ

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ದೇಶದಲ್ಲಿ ಬಳಕೆಯಾಗದ 22 ಕೋಟಿಗೂ ಅಧಿಕ ಕೋವಿಡ್​ ಲಸಿಕೆ ಡೋಸೇಜ್​ಗಳನ್ನು ರಫ್ತು ಮಾಡುವ ಬಗ್ಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಕೇಂದ್ರ ಸರ್ಕಾರವು ಇತ್ತೀಚೆಗೆ ಕೋವ್ಯಾಕ್ಸ್​ ಸರಬರಾಜು ಪುನಾರಂಭಿಸಿದ್ದು, ಇದೀಗ ವಾಣಿಜ್ಯ ರಫ್ತುಗಳನ್ನೂ ಆರಂಭಿಸುವ ಬಗ್ಗೆ ಯೋಚಿಸುತ್ತಿದೆ. ಕೋವ್ಯಾಕ್ಸ್​ ಮೂಲಕ 1 ಕೋಟಿ ಡೋಸ್​ ಕೋವಿಶೀಲ್ಡ್​ಗಳನ್ನೂ ರಫ್ತು ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಸೀರಮ್​​ ಸಂಸ್ಥೆಗೆ ಅನುಮತಿ ನೀಡಿದೆ. 8 ತಿಂಗಳುಗಳ ಕಾಲ ರಫ್ತು ನಿಲ್ಲಿಸಿದ್ದ ಭಾರತವು ಮಯನ್ಮಾರ್​, ನೇಪಾಳ, ಬಾಂಗ್ಲಾ ಹಾಗೂ ಇರಾನ್​​ಗೆ ಲಸಿಕೆ ಪೂರೈಕೆ ಪುನಾರಂಭಿಸಿದೆ.

ದೇಶದಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ದೇಶವು ಕೋವಿಡ್​ ಲಸಿಕೆಗಳನ್ನು ಹೆಚ್ಚೆಚ್ಚು ಪೂರೈಕೆ ಮಾಡಲಿದೆ. ರಫ್ತಿಗೆ ಅನುಮತಿ ನೀಡದೇ ಇದ್ದರೆ ನಾವು ಇನ್ನೇನು ಮಾಡಬೇಕು ಎಂದು ಮೂಲಗಳು ಹೇಳಿವೆ. ನವೆಂಬರ್​ ತಿಂಗಳಲ್ಲಿ 30 ಕೋಟಿ ಡೋಸ್​ಗಳನ್ನು ವಿತರಿಸಲಾಗಿದೆ. ಆದರೆ ಇದುವರೆಗೆ 8.8 ಕೋಟಿ ಡೋಸ್​ಗಳನ್ನು ಮಾತ್ರ ಜನರಿಗೆ ನೀಡಲಾಗಿದೆ.

ಡಿಸೆಂಬರ್​​ ತಿಂಗಳಿನಲ್ಲಿ ಪೂರೈಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಡಿಸೆಂಬರ್​ ತಿಂಗಳಲ್ಲಿ ಸುಮಾರು 31 ಕೋಟಿ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಡೋಸ್​ಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಇದರ ಜೊತೆಯಲ್ಲಿ ಕ್ಯಾಡಿಲ್​ ಹೆಲ್ತ್​ಕೇರ್​ನಿಂದ ಜೈಕೋವ್​ ಡಿ ಹೆಚ್ಚುವರಿ 2 ಕೋಟಿ ಡೋಸ್​ಗಳನ್ನು ನಿರೀಕ್ಷಿಸಲಾಗಿದೆ.

ಒಟ್ಟಾರೆಯಾಗಿ ವಿಶ್ವದಲ್ಲಿ ಕೊರೊನಾ ಲಸಿಕೆಗಳಿಗೆ ಇನ್ನೂ ಬೇಡಿಕೆ ಇದೆ. ಜಾಗತಿಕವಾಗಿ ಈಗಾಗಲೇ ಲಭ್ಯವಿರುವ ಲಸಿಕೆಗಳಿಗಿಂತ ಭಾರತದ ಕೋವಿಡ್​ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ನಿರೀಕ್ಷಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರವು ಕೋವಿಡ್​ ಲಸಿಕೆ ಡೋಸೇಜ್​ಗಳ ವಾಣಿಜ್ಯ ರಫ್ತು ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...