alex Certify ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ಏಮ್ಸ್ ನಿರ್ದೇಶಕರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ಏಮ್ಸ್ ನಿರ್ದೇಶಕರಿಂದ ಮಹತ್ವದ ಮಾಹಿತಿ

ಭಾರತದಲ್ಲಿ ಸೆಪ್ಟೆಂಬರ್​ ತಿಂಗಳಿನಿಂದ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ ಹೇಳಿದ್ದಾರೆ. ಅಲ್ಲದೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಹರಡುವಿಕೆಗೆ ಇನ್ನಷ್ಟು ಬ್ರೇಕ್​ ಹಾಕಿದಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೈಡಸ್​ ಈಗಾಗಲೇ ತನ್ನ ಪ್ರಾಯೋಗಿಕ ಪರೀಕ್ಷೆಯನ್ನ ಪೂರ್ಣಗೊಳಿಸಿದೆ. ಈ ಲಸಿಕೆಯ ತುರ್ತು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಪ್ರಯೋಗಗಳು ಆಗಸ್ಟ್​ ಅಥವಾ ಸೆಪ್ಟೆಂಬರ್​ ತಿಂಗಳೊಳಗಾಗಿ ಮುಗಿಯಲೇಬೇಕು. ಅಲ್ಲದೇ ಆದಷ್ಟು ಬೇಗ ತುರ್ತು ಅನುಮೋದನೆಯನ್ನೂ ಪಡೆಯಬೇಕು. ಫೈಜರ್​ ಲಸಿಕೆಗೆ ಈಗಾಗಲೇ ಎಫ್​ಡಿಎ ಅನುಮೋದನೆ ಸಿಕ್ಕಾಗಿದೆ. ಸೆಪ್ಟೆಂಬರ್​ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿದಲ್ಲಿ ಮಾತ್ರ ಕೊರೊನಾ ಸರಪಳಿಯನ್ನ ತುಂಡು ಮಾಡಬಹುದಾಗಿದೆ ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ನಾವು ನಮ್ಮದೇ ಆದ ಸ್ವಂತ ಲಸಿಕೆಗಳನ್ನ ಹೊಂದೋದು ಈ ಸಮಯದಲ್ಲಿ ನಿಜಕ್ಕೂ ಪ್ರಾಮುಖ್ಯತೆ ಪಡೆಯಲಿದೆ. ಹೀಗಾಗಿ ಭಾರತ್​ ಬಯೋಟೆಕ್​ ಹಾಗೂ ಜೈಡಸ್​ಗಳು ಕೂಡಲೇ ಅನುಮೋದನೆ ಪಡೆಯುವಂತಾಗಬೇಕು. ಫೈಜರ್​ ಲಸಿಕೆ ಕೂಡ ಸುರಕ್ಷಿತವಾಗಿದೆ ಎಂದು ಸಾಬೀತು ಪಡಿಸುವ ಸಾಕ್ಷ್ಯಗಳು ನಮ್ಮೆದುರಿಗಿದೆ. ಸೆಪ್ಟೆಂಬರ್​ ತಿಂಗಳ ವೇಳೆಗೆ ನಾವು ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಲಸಿಕೆಯನ್ನ ಹೊಂದಿರುತ್ತೇವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...