ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಅಲ್ಲದೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಹರಡುವಿಕೆಗೆ ಇನ್ನಷ್ಟು ಬ್ರೇಕ್ ಹಾಕಿದಂತೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೈಡಸ್ ಈಗಾಗಲೇ ತನ್ನ ಪ್ರಾಯೋಗಿಕ ಪರೀಕ್ಷೆಯನ್ನ ಪೂರ್ಣಗೊಳಿಸಿದೆ. ಈ ಲಸಿಕೆಯ ತುರ್ತು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಪ್ರಯೋಗಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳೊಳಗಾಗಿ ಮುಗಿಯಲೇಬೇಕು. ಅಲ್ಲದೇ ಆದಷ್ಟು ಬೇಗ ತುರ್ತು ಅನುಮೋದನೆಯನ್ನೂ ಪಡೆಯಬೇಕು. ಫೈಜರ್ ಲಸಿಕೆಗೆ ಈಗಾಗಲೇ ಎಫ್ಡಿಎ ಅನುಮೋದನೆ ಸಿಕ್ಕಾಗಿದೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿದಲ್ಲಿ ಮಾತ್ರ ಕೊರೊನಾ ಸರಪಳಿಯನ್ನ ತುಂಡು ಮಾಡಬಹುದಾಗಿದೆ ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ನಾವು ನಮ್ಮದೇ ಆದ ಸ್ವಂತ ಲಸಿಕೆಗಳನ್ನ ಹೊಂದೋದು ಈ ಸಮಯದಲ್ಲಿ ನಿಜಕ್ಕೂ ಪ್ರಾಮುಖ್ಯತೆ ಪಡೆಯಲಿದೆ. ಹೀಗಾಗಿ ಭಾರತ್ ಬಯೋಟೆಕ್ ಹಾಗೂ ಜೈಡಸ್ಗಳು ಕೂಡಲೇ ಅನುಮೋದನೆ ಪಡೆಯುವಂತಾಗಬೇಕು. ಫೈಜರ್ ಲಸಿಕೆ ಕೂಡ ಸುರಕ್ಷಿತವಾಗಿದೆ ಎಂದು ಸಾಬೀತು ಪಡಿಸುವ ಸಾಕ್ಷ್ಯಗಳು ನಮ್ಮೆದುರಿಗಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ನಾವು ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಲಸಿಕೆಯನ್ನ ಹೊಂದಿರುತ್ತೇವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.