ಈ ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ. ಆಗಸ್ಟ್ನಲ್ಲಿ ಆರಂಭವಾಗಲಿರುವ ಕೊರೊನಾ ಮೂರನೇ ಅಲೆಯು ಕನಿಷ್ಟ 1 ಲಕ್ಷ ಹಾಗೂ ಗರಿಷ್ಟ 1.5 ಲಕ್ಷ ಹೊಸ ಪ್ರಕರಣಗಳನ್ನು ಈ ತಿಂಗಳಲ್ಲಿ ವರದಿ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್ ಐಐಟಿಯ ಮಾಥುಕುಮಲ್ಲಿ ವಿದ್ಯಾಸಾಗರ ಹಾಗೂ ಮಣಿಂದ್ರ ಅಗರ್ವಾಲ್ ಕೊರೊನಾ ಮೂರನೇ ಅಲೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಆಗಸ್ಟ್ನಿಂದ ಆರಂಭವಾಗಲಿರುವ ಕೊರೊನಾ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಗಂಭೀರ ಸ್ವರೂಪಕ್ಕೆ ಹೋಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆಯು 2 ಅಲೆಯಷ್ಟು ಭೀಕರವಾಗಿ ಇರೋದಿಲ್ಲ. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ದಿನಕ್ಕೆ 4 ಲಕ್ಷಕ್ಕಿಂತ ಅಧಿಕ ಪ್ರಕರಣ ವರದಿ ಮಾಡಿತ್ತು. ಈಗ ಈ ಸಂಖ್ಯೆ ತಹಬಧಿಗೆ ಬಂದಿದೆ.
ಈ ಹಿಂದೆ ಕೊರೊನಾ ಎರಡನೆ ಅಲೆ ಆರಂಭಕ್ಕೂ ಮುನ್ನವೇ ನಿಖರ ಮಾಹಿತಿ ನೀಡಿದ್ದ ವಿದ್ಯಾಸಾಗರ್, ಗಣಿತದ ಮಾದರಿಯ ರೀತಿಯಲ್ಲೇ ಕೊರೊನಾ ಪ್ರಕರಣಗಳು ವರದಿಯಾಗಲಿದೆ. ನಮ್ಮ ಅಧ್ಯಯನದಲ್ಲಿ ತಿಳಿದ ಅಂದಾಜಿನ ಪ್ರಕಾರ ಜೂನ್ ಅಂತ್ಯದ ವೇಳೆಗೆ ಕೊರೊನಾ ಪ್ರಕರಣಗಳು ದಿನಕ್ಕೆ 20 ಸಾವಿರ ವರದಿಯಾಗಲಿದೆ ಎಂದು ಅಂದಾಜಿಸಿದ್ದರು.