alex Certify ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 2ನೇ ಅಲೆ ವೇಳೆ ಅತಿ ಹೆಚ್ಚು ಬಳಕೆಯಾಗಿದೆ ಈ ಪದ..!

ಫೆಬ್ರವರಿ – ಮಾರ್ಚ್ ತಿಂಗಳ ಅವಧಿಗೆ ಹೋಲಿಕೆ ಮಾಡಿದ್ರೆ ಏಪ್ರಿಲ್​ ಹಾಗೂ ಮೇ ತಿಂಗಳಿನಲ್ಲಿ ಟ್ವಿಟರ್​ನಲ್ಲಿ ಕೋವಿಡ್​ 19ಗೆ ಸಂಬಂಧಿಸಿದ ಟ್ವೀಟ್​ಗಳ ಸಂಖ್ಯೆ 600 ಪ್ರತಿಶತ ಅಧಿಕವಾಗಿದೆ. ಅಲ್ಲದೇ ವೈದ್ಯಕೀಯ ಸಹಾಯಕ್ಕಾಗಿ ಅಂಗಲಾಚಿ ಮಾಡಲಾದ ಟ್ವೀಟ್​ಗಳ ಸಂಖ್ಯೆ 1958 ಪ್ರತಿಶತ ಅಧಿಕವಾಗಿದೆ ಎಂಬುದು ದತ್ತಾಂಶಗಳ ಮೂಲಕ ತಿಳಿದು ಬಂದಿದೆ.

ಏಪ್ರಿಲ್​​ ಹಾಗೂ ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ಗಂಭೀರವಾಗಿತ್ತು. ಈ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಬೆಡ್​ ಸಿಗುತ್ತಿರಲಿಲ್ಲ, ಆಕ್ಸಿಜನ್​ ಅಭಾವ, ರೆಮ್​ಡೆಸಿವರ್​ಗೆ ಹೆಚ್ಚಿದ ಬೇಡಿಕೆ, ಆಮ್ಲಜನಕ ಸಾಂದ್ರಕಗಳಿಗಾಗಿ ಹುಡುಕಾಟ ಹೀಗೆ ಸಾಕಷ್ಟು ವಿಚಾರಗಳಿಂದ ಜನತೆ ತತ್ತರಿಸಿ ಹೋಗಿದ್ದರು. ಈ ಕಷ್ಟದ ಸಂದರ್ಭದಲ್ಲಿ ಅನೇಕರು ಟ್ವಿಟರ್​ನಲ್ಲಿ ಸಹಾಯಕ್ಕಾಗಿ ಅಂಗಲಾಚಿಸಿದ್ದರು.

ಏಕಾಏಕಿ ಮನೆಗೆ ನುಗ್ಗಿದ ಟ್ರಕ್​: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ #Covid19 ಎಂಬ ಹ್ಯಾಶ್​ಟ್ಯಾಗ್​​ನ್ನು 77 ಪ್ರತಿಶತಕ್ಕಿಂತಲೂ ಅಧಿಕ ಬಾರಿ ಬಳಕೆ ಮಾಡಲಾಗಿದೆ. ಅದೇ ರೀತಿ #Blood ಶೇಕಡಾ 72, #SOS ಶೇಕಡಾ 152ಕ್ಕಿಂತಲೂ ಅಧಿಕ ಬಾರಿ ಬಳಕೆ ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಆಟಗಾರ ಕ್ಯೂಮಿನ್ಸ್ ಭಾರತಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಮಾಡಿದ ಟ್ವೀಟ್​ ಈ ಅವಧಿಯಲ್ಲಿ ಅತೀ ಹೆಚ್ಚು ಲೈಕ್​ ಹಾಗೂ ರಿಟ್ವೀಟ್​ ಮಾಡಲಾದ ಟ್ವೀಟ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...