ಕೋವಿಡ್ ಪಾಸಿಟಿವ್ ಇರುವ ತಾಯಂದಿರು ತಮ್ಮ ಕಂದಮ್ಮಗಳಿಗೆ ಹಾಲುಣಿಸುವ ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಮಂಜು ಪುರಿ ತಿಳಿಸಿದ್ದಾರೆ.
ʼಬೆಳ್ಳಿʼ ಗೆದ್ದ ಬಾಲೆಗೆ ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಸ್ವಾಗತ
ತಾಯಿಯಿಂದ ಗರ್ಭದಲ್ಲಿರುವ ಭ್ರೂಣಕ್ಕೂ ಕೋವಿಡ್ ಬರುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದಿರುವ ಮಂಜು, ಕೋವಿಡ್ ಲಸಿಕೆಗಳಿಂದ ಜನನಾಂಗಗಳು ಹಾಗೂ ಫಲವತ್ತತೆಯ ಮೇಲೆ ಯಾವುದೇ ದುಷ್ಪರಿಣಾಮವಾಗದು ಎಂದು ಸ್ಪಷ್ಟಪಡಿಸಿದ್ದಾರೆ.
“ಮಗುವಿನ ಆರೈಕೆ ಮಾಡಲು ಯಾರೂ ಇಲ್ಲದೇ ಇರುವ ವೇಳೆಯಲ್ಲಿ ತಾಯಂದಿರು ಮಾಸ್ಕ್ ಧರಿಸಿ ಯಾವಾಗಲೂ ಮಕ್ಕಳಿಂದ ಅಂತರ ಕಾಯ್ದುಕೊಳ್ಳಬೇಕು. ತಾಯಿ ಹಾಗೂ ಮಗು ಚೆನ್ನಾಗಿ ಗಾಳಿಯಾಡುವ ಕೋಣೆಯಲ್ಲಿ ಇರಬೇಕು. ಆಗಾಗ ತಾಯಿ ತನ್ನ ಕೈಗಳನ್ನು ಹಾಗೂ ಸುತ್ತಲಿನ ಜಾಗವನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು” ಎಂದು ಮಂಜು ತಿಳಿಸಿದ್ದಾರೆ.