alex Certify ʼವರ್ಕ್ ಫ್ರಮ್ ಹೋಂʼ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವರ್ಕ್ ಫ್ರಮ್ ಹೋಂʼ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್

ಕೋವಿಡ್‌ನಿಂದ ಹೆಚ್ಚು ಪ್ರಚಲಿತಕ್ಕೆ ಬಂದ ವರ್ಕ್ ಫ್ರಮ್ ಹೋಂ ಕಲ್ಚರ್‌ ಈಗಲೂ ಹೆಚ್ಚು ಚರ್ಚೆಯಾಗುತ್ತಿದೆ. ಕೋವಿಡ್ ತಗ್ಗಿದರೂ ವರ್ಕ್ ಫ್ರಮ್ ಬಗ್ಗೆ ಕಂಪನಿಗಳು ಮತ್ತು ನೌಕರರು ತಮ್ಮ‌‌ ನಿಲುವುಗಳಿಗೆ ಅಂಟಿಕೊಂಡಿದ್ದಾರೆ.

ಕೊರೊನಾ ವೈರಸ್ ಪ್ರಕರಣ ದೇಶಾದ್ಯಂತ ಇಳಿಮುಖವಾಗಿದ್ದರೂ, ಇಂಡಿಯಾ ಇಂಕ್ ಉದ್ಯೋಗಿಗಳಿಗೆ ಹೈಬ್ರಿಡ್ ಮೋಡ್‌ನಲ್ಲಿ ಕೆಲಸ ಮಾಡುವ ಮೂಲಕ ಮುಂದುವರಿಯಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಇದೇ ರೀತಿ ಕೆಲವು ಕಂಪನಿಗಳು ಮನೆಯಿಂದ ಕಾಯಂ ಕೆಲಸ ಮಾಡುವ ಭರವಸೆ ನೀಡಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ.

ಸಿಐಇಎಲ್ ಎಚ್‌ಆರ್ ನಡೆಸಿದ ಸಮೀಕ್ಷೆಯ ಪ್ರಕಾರ 50 ಪ್ರತಿಶತದಷ್ಟು ಕಂಪನಿಗಳು ರಿಮೋಟ್ ವರ್ಕಿಂಗ್ ಆಯ್ಕೆಯನ್ನು ಆಯ್ಕೆ ಮಾಡಲು ಉದ್ಯೋಗಿಗಳಿಗೆ ಅವಕಾಶ ನೀಡುತ್ತಿವೆ.

BIG NEWS: ಬೀಗ ಹಾಕಿದ್ದ ಮನೆಗಳೇ ಖತರ್ನಾಕ್ ಕಳ್ಳರ ಟಾರ್ಗೆಟ್; ಮೂವರ ಬಂಧನ; 49 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಇದಲ್ಲದೆ, ಹೊಸ ನೇಮಕಾತಿಗಳಲ್ಲಿ ಸುಮಾರು ಶೇ.10 ರಷ್ಟು ಶಾಶ್ವತವಾಗಿ ವರ್ಕ್ ಫ್ರಮ್ ಹೋಂ ಅವಕಾಶ ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯು ಸೂಚಿಸಿದೆ. ಹಲವಾರು ಕಂಪನಿಗಳು 2020 ರಲ್ಲಿ ಅಳವಡಿಸಿಕೊಂಡ ಹೈಬ್ರಿಡ್ ಕೆಲಸವು ದೀರ್ಘಾವಧಿಯಲ್ಲಿ ಮುಂದುವರಿಯಲಿದೆ ಎಂದು ಕಂಪನಿ ಮುಖ್ಯಸ್ಥರೇ ಅಭಿಪ್ರಾಯ ನೀಡಿದ್ದಾರೆ.

ಮೊಂಡೆಲೆಜ್ (ಅಮೆರಿಕನ್ ಬಹುರಾಷ್ಟ್ರೀಯ ಮಿಠಾಯಿ), ಮಾರುತಿ ಸುಜುಕಿ ಮತ್ತು ಟಾಟಾ ಸ್ಟೀಲ್‌ನಂತಹ ಕೆಲವು ಕಂಪನಿಗಳು ಖಾಯಂ ವರ್ಕ್ ಫ್ರಮ್ ಹೋಮ್ ರೂಪದಲ್ಲೇ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ದೃಢಪಡಿಸಿವೆ.

ಝೆರೋಧಾ ಕಂಪನಿ ಶಾಶ್ವತವಾಗಿ ವರ್ಕ್ ಫ್ರಮ್ ಹೋಂ ಮುಂದುವರಿಸುವ ಭಾಗವಾಗಿ ಕೆಲವು ದಿನಗಳ ಹಿಂದೆ ತನ್ನ ಉದ್ಯೋಗಿಗಳಿಗೆ ತಿಳಿಸಿದ್ದು, ಹೈಬ್ರಿಡ್ ಅವಕಾಶ ನೀಡಿದೆ. ಆಪಲ್ ಕಂಪನಿ ವಾರದಲ್ಲಿ ಮೂರು ಬಾರಿ ಕಚೇರಿಗೆ ಬಂದರೆ ಸಾಕೆಂದು ತನ್ನ ನೌಕರರಿಗೆ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...